ನವದೆಹಲಿ: ಭಾರತ ಕ್ರೀಡೆ ಇತ್ತೀಚನ ದಿನಗಳಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಕ್ರಿಕೆಟ್ ಒಂದೇ ದೇಶದ ನಾಡಿ ಮಿಡಿತವಾಗಿತ್ತು. ಇನ್ನು ಮುಂದಿನ 5 ವರ್ಷಗಳಲ್ಲಿ ಭಾರತದ ಕ್ರೀಡಾ ಕ್ಷೇತ್ರ ಸಾಕಷ್ಟು ಬೆಳವಣಿಗೆ ಕಾಣಲಿದೆ.
ದೇಶದ ಜಿಡಿಪಿಯಲ್ಲಿ ಕ್ರೀಡಾ ಕ್ಷೇತ್ರ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಲಾಗುತ್ತಿದೆ. ಕ್ಷೀಡಾಕ್ಷೇತ್ರ ತನ್ನ ವಹಿವಾಟನ್ನ 72, 452 ಕೋಟಿ ರೂಪಾಯಿಗೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಸ್ವತಃ ಸ್ಟಾರ್ ಇಂಡಿಯಾ ನಿರ್ದೇಶಕ ಸಂಜಯ್ ಗುಪ್ತಾ, ಮುಂದಿನ ಐದು ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆ 0.5ರಷ್ಟು ಹೆಚ್ಚಿದರೆ ಅದರಲ್ಲಿ ಕ್ರೀಡಾ ಕ್ಷೇತ್ರದ ಪಾಲು 0.1 ಆಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.