ಮುಂಬೈ: ಕ್ರಿಕೆಟ್ ದಂತ ಕತೆ ಸಚಿನ್ ತೆಂಡೂಲ್ಕರ್ ಐದನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಗೂ ಮುನ್ನವೇ ತಂಡದಲ್ಲಿದ್ದ ತಮ್ಮ 20ರಷ್ಟು ಷೇರುಗಳನ್ನ ಮಾರಾಟ ಮಾಡಿದ್ದಾರೆ.
ಕಳೆದ ನಾಲ್ಕು ಆವೃತ್ತಿಗಳಿಂದ ಸಚಿನ್ತೆಂಡೂಲ್ಕರ್ ಕೇರಳ ಬ್ಲಾಸ್ಟರ್ಸ್ ತಂಡದ ಸಹಮಾಲೀಕರಾಗಿದ್ದರು. 2014ರ ಮೊದಲ ಆವೃತ್ತಿಯಿಂದಲೂ ಕ್ರಿಕೆಟ್ ದೇವರು ಸದಾ ತಂಡದೊಂದಿಗೆ ಇದ್ದು ತಂಡವನ್ನ ಹುರಿದುಂಬಿಸುತ್ತಿದ್ದರು. ಸಚಿನ್ ನಿರ್ಗಮನದಿಂದ ತಂಡಕ್ಕೆ ಭಾರೀ ಪೆಟ್ಟು ಬೀಳಲಿದೆ. ಇವರೊಂದಿಗೆ ಉದ್ಯಾಮಿ ಪ್ರಸಾದ್, ನಟರಾದ ಅಲ್ಲು ಅರ್ಜುನ್, ನಾಗರ್ಜುನ ಮತ್ತು ಚಿರಂಜೀವಿ ಸಹಮಾಲೀಕರಾಗಿದ್ದರು. ಸಚಿನ್ ತಮ್ಮ ಶೇ.20ರಷ್ಟು ಷೇರುಗಳನ್ನ ಮಾರಾಟ ಮಾಡಿದ್ದು ಆಶ್ಚರ್ಯ ತಂದಿದೆ.