ಲಂಡನ್: 2015ರ ಆಶಸ್ ಸರಣಿ ವೇಳೆ ಆಸ್ಟ್ರೇಲಿಯಾ ಕ್ರಿಕೆಟಿಗನೊಬ್ಬ ತಮ್ಮನ್ನು ಒಸಮಾ ಎಂದು ನಿಂದಿಸಿದ್ದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯಿನ್ ಅಲಿ ತಮಗೆ ಆದ ಅನುಭವವನ್ನ ತಮ್ಮ ಆತ್ಮ ಚರಿತ್ರೆಯಲ್ಲಿ ಬಹಿರಂಗ ಪಡಿಸಿದ್ದಾರೆ.
ಮೂರು ವರ್ಷದ ಹಿಂದೆ ಕಾರ್ಡಿಫ್ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರನೊಬ್ಬ ಮೈದಾನದಲ್ಲೆ ಒಸಮಾ ಎಂದು ಕರೆದು ಸಿಟ್ಟು ಬರಿಸಿದ್ದ. ನಾನು ತಕ್ಷಣ ತಂಡದ ಆಟಗಾರರಿಗೆ ಮತ್ತು ಕೋಚ್ ಟ್ರೆವರ್ ಬೆಲಿಸ್ ಅವರಿಗೆ ದೂರು ಕೊಟ್ಟೆ. ಟ್ರೆವರ್ ಬೆಲಿಸ್ ತಕ್ಷಣ ಆಸೀಸ್ ಕೋಚ್ ಡೆರೆನ್ ಲೆಹಮನ್ಗೆ ಹೇಳಿದ್ರು. ಲೆಹವiನ್ ಆ ಆಟಗಾರನನ್ನ ಕರೆದು ಕೇಳಿದ್ರು. ಆಗ ಆ ಆಟಗಾರ ತನ್ನ ತಪ್ಪನ್ನ ಒಪ್ಪಿಕೊಳ್ಳಲಿಲ್ಲ. ನಾನು ಒಸಮಾ ಎಂದು ಕರೆದಿಲ್ಲ ಪಾರ್ಟ್ ಟೈಮರ್ ಎಂದು ಕರೆದಿದ್ದಾಗಿ ಹೇಳಿದ.
ನನಗೆ ಆಶ್ಚರ್ಯ ಆಯ್ತು ಒಸಮಾ ಮತ್ತು ಪಾರ್ಟ್ ಟೈಮರ್ ಎರಡು ಶಬ್ದಗಳ ವ್ಯತ್ಯಾಸ ನನಗೆ ಗೊತ್ತು ಎಂದು ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾ ಇಂಥ ಪ್ರಕರಣವನ್ನ ನಾವು ಸಹಿಸುವುದಿಲ್ಲ. ಇದಕ್ಕೆ ನಮ್ಮ ಕ್ರೀಡೆಯಲ್ಲಿ ಮತ್ತು ಸಮಾಜದಲ್ಲಿ ಇದಕ್ಕೆ ಅವಕಾಶ ಕೊಡೊದಿಲ್ಲ. ನಾವು ಇದನ್ನ ಗಂಭಿರವಾಗಿ ತೆಗೆದುಕೊಂಡಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.