ದನದಾಹಿ ಕಿಮ್ಸ್

ಹುಬ್ಬಳ್ಳಿ- ಸದಾ ಒಂದಿಲ್ಲೊಂದು ಅವಾಂತರ ಸೃಷ್ಟಿಸಿ ಸುದ್ದಿಯಲ್ಲಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ‌. ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ಸಂಬಂಧಪಟ್ಟ ವಾರ್ಡ್ ಗೆ ಕರೆದುಕೊಂಡು ಹೋಗುವ ಸಿಬ್ಬಂದಿಯ ದನದಾಹಕ್ಕೆ ಬೇಸತ್ತು ಸಂಬಂಧಿಗಳೇ ಸ್ಟ್ರೇಚರ್ ಮೇಲೆ ರೋಗಿಗಳನ್ನು ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿದ್ರು ರೋಗಿಗಳ ಸಹಾಯಕ್ಕೆ ಬರದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ತುರ್ತು‌ ನೀಗಾ ಘಟಕದಿಂದ ಕ್ಯಾತಲ್ಯಾಬ್ ವರೆಗೆ ಸಿಬ್ಬಂದಿ ಇಲ್ಲದೆ ಸಂಬಂಧಿಕರೇ ಸ್ಟ್ರೇಚರ್ ತಳ್ಳಿಕೊಂಡು ಹೋಗಿದ್ದಾರೆ. ಮೇಲಿಂದ ಮೇಲೆ ಕಿಮ್ಸ್ ನಲ್ಲಿ ಇಂಥ ಯಡವಟ್ಟು ನಡೆದ್ರು ಕಿಮ್ಸ್ ಕ್ರಮ ಕೈಗೊಳ್ಳುತ್ತಿಲ್ಲ. ಸಿಬ್ಬಂದಿಗೆ ಕೇಳಿದ್ರೆ ಹಣದ ಬೇಡಿಕೆ ಇಡುತ್ತಾರೆ.
ದುಡ್ಡು ನೀಡದೇ ಹೊದ್ರೆ ಯಾರು ಸಹಾಯ ಮಾಡಲ್ಲ. ಹೀಗಾಗಿ ಹಣ ನೀಡದೇ ತಾವೇ ಸ್ಟ್ರೆಚ್ಚರ್ ತಳ್ಳಿಕೊಂಡು ಹೋಗುತ್ತೇವೆ ಎಂದು ರೋಗಿಗಳ ಸಂಬಂಧಿಗಳ ಆರೋಪವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ