ಸಿಂಹಳೀಯರ ಎದುರು ಘರ್ಜಿಸಿದ ಬಾಂಗ್ಲ ಟೈಗರ್ಸ್..!

ದುಬೈ:ಏಷ್ಯಾ ಕಪ್ ಉದ್ಘಾಟನಾ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಶ್ರೀಲಂಕಾ ವಿರುದ್ಧ 137 ರನ್‍ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ದುಕೊಂಡ ಬಾಂಗ್ಲೆ ದೇಶ ತಂಡ ಎರಡು ವಿಕೆಟ್‍ಗಳನ್ನ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಓಪನರ್ ತಮೀಮ್ ಇಕ್ಬಲ್ ಗಾಯಗೊಂಡು ಹೊರ ನಡೆದ್ರು.
ನಾಲ್ಕನೆ ವಿಕೆಟ್‍ಗೆ ಜೊತೆಗೂಡಿದ ಮುಷ್ಫಿಕಿರ್ ರಹೀಂ ಮತ್ತು ಮೊಹ್ಮದ್ ಮಿಥುನ್ 132 ರನ್‍ಗಳ ಭರ್ಜರಿ ಜೊತೆಯಾಟ ಅಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮಿಥುನ್ 63 ರನ್‍ಗಳಿಸಿ ಔಟಾದೆ,್ರ ಮುಷ್ಫಿಕಿರ್ ರಹೀಂ 144 ರನ್ ಬಾರಿಸಿ ಪೆವಲಿಯನ್ ಸೇರಿದ್ರು. ಬಾಂಗ್ಲಾದೇಶ ತಂಡ 49.3 ಓವರ್‍ಗಳಲ್ಲಿ 261 ರನ್‍ಗಳಿಗೆ ಆಲೌಟ್ ಆಯಿತು. ಲಂಕಾ ಪರ ಮಲಿಂಗ 4 ವಿಕೆಟ್ ಪಡೆದರು.
261 ರನ್‍ಗಳ ಸವಾಲಿನ ಮೊತ್ತ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡ ಬಾಂಗ್ಲ ಬೌಲರ್‍ಗಳ ಸಂಘಟಿತ ದಾಳಿಗೆ ನಲುಗಿ ಹೋಯಿತು. 40 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‍ಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಅಂತಿಮವಾಗಿ 35.2 ಓವರ್‍ಗಳಲ್ಲಿ 124 ರನ್‍ಗಳಿಗೆ ಶ್ರೀಲಂಕಾ ಆಲೌಟ್ ಆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ