ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್ ಕೆಮರಾನ್ ವೈಟ್ ದೇಸಿ ಟೂರ್ನಿ ವೇಳೆ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಇಲ್ಲಿನ ದೇಸಿ ಟೂರ್ನಿ ಜೆಎಲ್ಟಿ ಕಪ್ನಲ್ಲಿ ವಿಕ್ಟೋರಿಯಾ ಮತ್ತು ಕ್ವೀನ್ಸ್ಲ್ಯಾಂಡ್ ನಡುವೆ ಪಂದ್ಯ ನಡೆಯುತ್ತಿತ್ತು. ಕ್ವೀನ್ಸ್ಲ್ಯಾಂಡ್ ತಂಡದ ಪರ ಕೆಮರಾನ್ ವೈಟ್ ಬ್ಯಾಟಿಂಗ್ ಮಾಡುತ್ತಿದ್ದಾಗ ವಿಕ್ಟೋರಿಯಾ ತಂಡದ ಬೌಲರ್ ಸ್ಟಾನ್ಲೇಕ್ ತಮ್ಮ ಮೂರನೇ ಓವರ್ನಲ್ಲಿ ಫುಲ್ಟಾಸ್ ಎಸೆತವನ್ನ ಎಸೆದರು. ಚೆಂಡು ನೇರವಾಗಿ ಕೆಮರಾನ್ ವೈಟ್ ಅವರ ಹೆಲ್ಮಟ್ಗೆ ಬಡಿಯಿತು. ಚೆಂಡು ಸ್ಟಾನ್ ಲೇಕ್ ಕೈಯಿಂದ ಜಾರಿದ್ದೆ ಘಟನೆಗೆ ಕಾರಣವಾಗಿದೆ. ಕ್ಷಣಾರ್ಧದಲ್ಲಿ ಕೆಮರಾನ್ ವೈಟ್ ಕುಸಿದು ಬಿದ್ದರು. ಅದೃಷ್ಟವಶತ್ ಕೆಮರಾನ್ ವೈಟ್ ಅಪಾಯದಿಂದ ಪಾರಾಗಿದ್ದರು. ತಂಡದ ಫಿಸಿಯೊ ಅಟ ಮುಂದುವರೆಸಲು ಅನುಮತಿ ಕೊಟ್ಟರು.
ಈ ಹಿಂದೆ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ಮನ್ ಫಿಲಿಪ್ ಹ್ಯೂಸ್ ಎದುರಾಳಿ ಬೌಲರ್ ಎಸೆದ ಚೆಂಡಿಗೆ ಸಾವನಪ್ಪಿದ್ದರು.