ಮಹಿಳೆಯರಿಗೆ ಉತ್ತಮ ಜೀವನೋಪಾಯ ರೂಪಿಸಿಕೊಳ್ಳಲು ಪ್ರಾಂಚೈಸಿ ಸೇವೆ ಸಹಕಾರಿ: ನಟಿ ತಾರಾ

ಬೆಂಗಳೂರು, ಸೆ.15- ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಜೀವನ ನಡೆಸುವುದೇ ದುಸ್ತರವಾಗಿದೆ. ಇಂತಹ ಸನ್ನಿವೇಶದಲ್ಲಿ ಮಹಿಳೆಯರಿಗೆ ಉತ್ತಮ ಜೀವನೋಪಾಯ ರೂಪಿಸಿಕೊಳ್ಳಲು ಪ್ರಾಂಚೈಸಿ ಸೇವೆ ಸಹಕಾರಿ ಯಾಗಲಿದೆ ಎಂದು ನಟಿ ತಾರಾ ಅನುರಾಧ ಹೇಳಿದರು.
ನಗರದ ದೊಮ್ಮಲೂರು ಮೇಲ್ಸೇತುವೆ ಕೋರಮಂಗಲ ಸರ್ವಿಆಧ ರಸ್ತೆಯಲ್ಲಿ ಮೂವರು ಮಹಿಳೆಯರು ಸೇರಿ ಪ್ರಾರಂಭಿಸಿರುವ ಫೆಮಿನೈನ್ 3ಕ್ರಿಯೇಷನ್ಸ್(ಇಂಡಿಯಾ)ಪ್ರೈವೆಟï ಲಿಮಿಟೆಡ್‍ನ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕೆಂಬ ಸಂಕಲ್ಪ ತೊಟ್ಟು ಮಹಿಳೆಯರಿಗಾಗಿಯೇ ಪ್ರಾಂಚೈಸಿಯನ್ನು ನೀಡುವ ಗುರಿಯಾಗಿಸಿಕೊಂಡು ಹೊಸ ಹೊಸ ಬಗೆಯ ಫ್ಯಾಷನ್ ಡಿಸೈನ್‍ಗಳನ್ನು ಪರಿಚಯಿಸಿರುವುದು ಉತ್ತಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಲ್ಲೂರಹಳ್ಳಿ ಶ್ರೀ ಚೆನ್ನ ವೃಷಭೇಂದ್ರ ಸ್ವಾಮಿ, ಲೀಲಾಮಠದ ಶ್ರೀ ನಾಗಾನಂದಸ್ವಾಮಿ, ಸಮಾಜ ಸೇವಕರಾದ ಪದ್ಮಾ ಶ್ರೀನಿವಾಸಮೂರ್ತಿ, ನಾಟ್ಯಾಲಯ ಇನ್‍ಸ್ಟಿಟ್ಯೂಟ್‍ನ ಸವಿತಾ ದಿನಕರ್, ಡಾ.ಶಾರದಾ ಶ್ರೀನಿವಾಸ್‍ಗೌಡ, ಡಾ.ಗಂಗಾ ವಿ.ಅಜಿರ್ ಕುಮಾರ್, ಡಾ.ಛಾಯಾ ಲೋಕೇಶ್, ಡಾ.ಭಾಗೀರತಿ ಸುರೇಶ್, ಕಂಪನಿಯ ನಿರ್ದೆಶಕರಾದ ಅಶ್ವಿನಿ ಕುಮಾರ್, ಮೇಘಶ್ರೀ ಮಂಜುನಾಥ್, ರಾಧಾಶಿವರಾಮï ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ