ಗೌತಮ್ ಗಂಭೀರ್ ಸೀರೆ ಉಟ್ಟಿದ್ದು ಯಾಕೆ ಗೊತ್ತಾ ?

ಹೊಸದಿಲ್ಲಿ: ನೇರವಾದ ಮಾತು ಮತ್ತು ಕೊಟ್ಟ ಮತಿನಂತೆ ನಡೆದುಕೊಂದು ಆಗಾಗ ಸುದ್ದಿಯಾಗುತ್ತಿರುವ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಈಗ ಸೀರೆ ಉಟ್ಟು, ಬಿಂದಿ ಹಾಕಿಕೊಳ್ಳುವ ಮೂಲಕ ಮತ್ತೊಂದು ಸಮಾಜಮುಖಿ ಕೆಲಸ ಮಾಡಿದ್ದಾರೆ.
ಇತ್ತಿಚೆಗೆ ನವದೆಹಲಿಯಲ್ಲಿ ಎಚ್‍ಐವಿ/ಎಡ್ಸ್ ಅಲಯಯನ್ಸ್ ಇಂಡಿಯಾ ಆಯೋಜನೆ ಮಾಡಿದ್ದ ಬಾರ್ನ್ ದಿಸ್ ವೇ ಕಾರ್ಯಕ್ರಮದಲ್ಲಿ ಗಂಭೀರ್ ಸೀರೆ ಉಟ್ಟು ಬಿಂದಿ ಹಚ್ಚಿಕೊಳ್ಳುವ ಮೂಲಕ ಲೈಂಗಿಕ ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಂತಿರುವುದಾಗಿ ಸಂದೇಶ ರವಾನಿಸಿದ್ದಾರೆ. ಇತ್ತಿಚೆಗೆ ಸುಪ್ರೀಂ ಕೋರ್ಟ್ ಸೆಕ್ಷನ್ 377 ಪರವಾಗಿ ತೀರ್ಪು ನೀಡಿತ್ತು.
ಸದ್ಯ ಕ್ರಿಕೆಟ್‍ನಿಂದ ದೂರವಿರುವ ಗೌತಮ್ ಗಂಭೀರ್ ಸಮಾಜ ಮುಖಿ ಕೆಲಸದಲ್ಲಿ ಮುಂದಿದ್ದಾರೆ. ಛತ್ತೋಸ್‍ಗಢದ ಸುಕ್ಮಾದಲ್ಲಿಬಾಂಬ್ ಸ್ಫೋಟದಲಲಿ ತಂದೆಯನ್ನ ಕಳೆದುಕೊಂಡ ಬಾಲಕಿಯ ವಿದ್ಯಾಭ್ಯಾಸದ ಖರ್ಚನ್ನ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ