ನವದೆಹಲಿ: ಉದ್ಯಮಿ ವಿಜಯ ಮಲ್ಯ ಲಂಡನ್ಗೆ ಪಲಾಯನ ಮಾಡುವ ವಿಚಾರ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಗೊತ್ತಿದ್ದರು ಕೇಂದ್ರ ತನಿಖಾ ಸಂಸ್ಥೆಗಳಿಗೇಕೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ತಾನು ಭೇಟಿಯಾಗಿದ್ದೇ ಎಂದು ವಿಜಯ್ ಮಲ್ಯ ಹೇಳಿಕೆ ನಿದಿದ್ದು, ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾರ್ಚ್ 1, 2016ರಂದು ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಜೇಟ್ಲಿ ಮತ್ತು ಮಲ್ಯ ನಡುವೆ ನಡೆದ ಮಾತುಕತೆಯನ್ನು ಕಾಂಗ್ರೆಸ್ ಮುಖಂಡ ಪಿ.ಎಲ್. ಪುನಿಯಾ ಅವರು ನೋಡಿದ್ದಾರೆಂದು ರಾಹುಲ್ ಪ್ರತಿಪಾದಿಸಿದರು.
ಜೇಟ್ಲಿ ಅವರ ರಾಜೀನಾಮೆಗೆ ಆಗ್ರಹಿಸಿರುವ ರಾಹುಲ್, ವಿಜಯ್ ಮಲ್ಯ ಪಲಾಯನ ಒಂದು ಒಳಸಂಚು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಅವರಿಬ್ಬರ ನಡುವೆ ಕೆಲವು ಒಪ್ಪಂದಗಳು ನಡೆದಿದೆ. ಕೂಡಲೇ ಜೇಟ್ಲಿ ಅವರು ರಾಜಿನಾಮೆ ನೀಡಬೇಕು. ಈ ಸಂಬಂಧ ತನಿಖೆ ನಡೆಯಬೇಕೆಂದು ರಾಹುಲ್ ಒತ್ತಾಯಿಸಿದ್ದಾರೆ.
ಮಲ್ಯ ಅವರ ಹಸ್ತಾಂತರ ಕುರಿತಾಗಿ ಲಂಡನ್ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೂ ಮೊದಲೇ ದೇಶ ಬಿಡುವ ಮುನ್ನ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ ಎಂದು ಮಲ್ಯ ಆರೋಪಿಸಿದ್ದರು.
ಮಲ್ಯ ಲೋಕಸಭೆ ಮೊಗಸಾಲೆಯಲ್ಲಿ ನನ್ನನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದು ನಿಜ. ಸಾಲ ಮರು ಪಾವತಿಯ ಬಗ್ಗೆ ಬ್ಯಾಂಕರ್ಗಳ ಜತೆ ಮಾತನಾಡಿ ಎಂದಷ್ಟೇ ಹೇಳಿದ್ದೆ ಎಂದು ಅರುಣ್ ಜೇಟ್ಲಿ ಅವರು ಸಮರ್ಥನೆ ನೀಡಿದ್ದರು.