ಪೊಲೀಸ್ ಠಾಣೆ ಎದುರೇ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ರಾಯಚೂರು: ಕಳ್ಳರು ಪೊಲೀಸ್ ಠಾಣೆ ಎದುರಿನ ಅಂಗಡಿಗೇ ಕನ್ನಹಾಕಿ ದುಡ್ಡು ದೋಚಿದ್ದಾರೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಜಾ ರಾಜೇಶ್ವರಿ ಮೆಡಿಕಲ್ ಸ್ಟೋರ್ ಬೀಗ ಮುರಿ

ದು ಹಣ ಕಳ್ಳತನ ಮಾಡಿದ್ದಾರೆ.

ಪಶ್ಚಿಮ ಪೊಲೀಸ್ ಠಾಣೆ ಎದುರುಗಡೆಯೇ ಇದ್ದರೂ ಯಾವ ಭಯವಿಲ್ಲದೆ ಮೆಡಿಕಲ್ ಸ್ಟೋರ್ ಬೀಗ ಒಡೆದು ಎರಡನೇ ಬಾರಿ ಕಳ್ಳತನ ಮಾಡಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಬಯಲಾಗಿದ್ದು ಶೆಟರ್ ಭಾಗಿಸಿ ಇಬ್ಬರು ಕಳ್ಳರು ಒಳಗೆ ನುಗ್ಗಿದ್ದಾರೆ. ಗಲ್ಲೆಯಲ್ಲಿದ್ದ 15 ಸಾವಿರ ರೂಪಾಯಿ ಹಣವನ್ನ ಕದ್ದಿದ್ದಾರೆ.

ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ತಿಂಗಳ ಹಿಂದೆಯೂ ಇದೇ ರೀತಿ ಕಳ್ಳತನವಾಗಿತ್ತು, ಆಗ 25 ಸಾವಿರ ರೂಪಾಯಿ ಹಣವನ್ನ ಕಳ್ಳರು ದೋಚಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ