ಬೆಳ್ಳಂಬೆಳಗ್ಗೆ ಜಮ್ಮ-ಕಾಶ್ಮೀರ, ಹರಿಯಾಣದಲ್ಲಿ ಭೂಕಂಪ

ನವದೆಹಲಿ: ಇಂದು ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ 5.15ಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪನವಾಗಿದ್ದು, ರಿಕ್ಟರ್​ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ಅಂತೆಯೆ ಹರಿಯಾಣದ ಝಜ್ಜರ ಜಿಲ್ಲೆಯಲ್ಲಿ 5.43ಕ್ಕೆ ಭೂಮಿ ಕಂಪಿಸಿದ್ದು, 3.1ರಷ್ಟು ತೀವ್ರತೆ ದಾಖಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್​ 9ರಂದು ಇದೇ ಜಿಲ್ಲೆಯಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿತ್ತು.ಭೂಕಂಪನದಿಂದ ಉಂಟಾಗಿರುವ ಜೀವ ಹಾಗೂ ಆಸ್ತಿ ಹಾನಿಯ ಬಗ್ಗೆ ಇನ್ನೂ ತಿಳಿದುಬಂದಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ