ಅಮೆರಿಕದೊಂದಿಗೆ ವಾಣಿಜ್ಯ ವಹಿವಾಟಿನಲ್ಲಿ ಭಾರತ ಆಸಕ್ತ: ಟ್ರಂಪ್‌

ವಾಷಿಂಗ್ಟನ್‌ : ಭಾರತ ವಿರುದ್ಧ ಅಮೆರಿಕ ಕಠಿನ ವಾಣಿಜ್ಯ ನಿಲುವು ಹೊಂದಿರುವ ಹೊರತಾಗಿಯೂ ಭಾರತ ಅಮೆರಿಕದೊಂದಿಗೆ ವಾಣಿಜ್ಯ ವಹಿವಾಟನ್ನು ಬಯಸಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೆಚ್ಚುಗೆಯಿಂದ ಹೇಳಿದ್ದಾರೆ.

ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಾಗಿರುವ ಭಾರತ ಮತ್ತು ಚೀನಕ್ಕೆ ಸಹಾಯಧನ ನಿಲ್ಲಿಸುವುದನ್ನು ಟ್ರಂಪ್‌ ಬಯಸುತ್ತಾರೆ; ಏಕೆಂದರೆ ಅವರ ದೃಷ್ಟಿಯಲ್ಲಿ ಅಮೆರಿಕವು ವರ್ಧಮಾನ ರಾಷ್ಟ್ರವಾಗಿದ್ದು ಅದು ಇತರೆಲ್ಲ ದೇಶಗಳಿಗಿಂತ ಹೆಚ್ಚು ವೇಗದಿಂದ ಬೆಳೆಯಬೇಕು ಎನ್ನುವುದೂ ಟ್ರಂಪ್‌ ಬಯಕೆಯಾಗಿದೆ.

ಅಂತೆಯೇ ಭಾರತ ಅಮೆರಿಕನ್‌ ಉತ್ಪನ್ನಗಳ ಮೇಲೆ ಶೇ.100 ಸುಂಕ ವಿಧಿಸಿದೆ ಎಂದು ಟ್ರಂಪ್‌ ಆರೋಪಿಸುತ್ತಿರುತ್ತಾರೆ.

ಬಾಬ್‌ ಲೀತ್‌ಝರ್‌ ನೇತೃತ್ವದ ತನ್ನ ವಾಣಿಜ್ಯ ಪ್ರತಿನಿಧಿಗಳನ್ನು ಟ್ರಂಪ್‌ ಹೊಗಳುತ್ತಾರೆ; ಏಕೆಂದರೆ ಟ್ರಂಪ್‌ ದೃಷ್ಟಿಯಲ್ಲಿ ಅವರು ತುಂಬ ಕಠಿನ, ಸ್ಮಾರ್ಟ್‌ ಮತ್ತು ಅತ್ಯುತ್ತಮ ಪ್ರತಿನಿಧಿಗಳಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ