ಭಾರತ್​ ಬಂದ್​ ಆದ್ರೂ ನಿಲ್ಲದ ಪೆಟ್ರೋಲ್​​-ಡೀಸೆಲ್​ ಬೆಲೆ ಏರಿಕೆ!

ಹೊಸದಿಲ್ಲಿ: ಗಗನಕ್ಕೇರುತ್ತಿರುವ ತೈಲ ಬೆಲೆಯನ್ನು ವಿರೋಧಿಸಿ ನಿನ್ನೆ ಪ್ರತಿಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಭಾರತ್​ ಬಂದ್​ ಮಾಡಿದವು. ಇನ್ನಾದರೂ ಬೆಲೆ ನಿಯಂತ್ರಣಕ್ಕೆ ಬರಬಹುದು ಎಂಬ ಜನಸಾಮಾನ್ಯನ ನಿರೀಕ್ಷೆ ಹುಸಿಯಾಗಿದೆ. ಇಂದು ಮತ್ತೆ ತೈಲ ಬೆಲೆಯಲ್ಲಿ ಏರಿಕೆಯುಂಟಾಗಿದೆ.

ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 80.87 ರೂ. ಆಗಿದ್ದು, ಡೀಸೆಲ್​ ಬೆಲೆ 72.97 ರೂ. ಆಗಿದೆ. ಎರಡೂ ತೈಲಗಳ ಬೆಲೆ 0.14 ರೂ.ನಷ್ಟು ಏರಿಕೆಯಾಗಿದೆ. ಅಂತೆಯೇ ಮುಂಬೈನಲ್ಲಿ ಪೆಟ್ರೋಲ್​ ಬೆಲೆ 88.26 ರೂ. ಹಾಗೂ ಡೀಸೆಲ್ ಬೆಲೆ 77.47 ರೂ.ಗೆ ಏರಿಕೆಯಾಗಿದೆ. ಕ್ರಮವಾಗಿ 0.14 ಹಾಗೂ 0.15 ರೂ.ನಷ್ಟು ಮತ್ತೆ ಏರಿಕೆ ಕಂಡಿದೆ.

ಇದರಿಂದ ವಾಹನ ಸವಾರರು ಮತ್ತೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನೇ ದಿನೆ ಏರುತ್ತಲೇ ಇರುವ ತೈಲ ಬೆಲೆ ಅದ್ಯಾವಾಗ ತಹಬದಿಗೆ ಬರುವುದೋ ಎಂದು ಜನಸಾಮಾನ್ಯ ಎದುರು ನೋಡುವಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ