ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನಾಧಾರಿತ ’ನಮ್ಮೂರ ದ್ವಾವಪ್ಪ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಹಾಸನ ಜಿಲ್ಲೆ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ ಡಿ ದೇವೇಗೌಡರು ತಮ್ಮ ಜೀವನ ಚರಿತ್ರೆ ಆಧಾರಿತ ಪುಸ್ತಕ ನಮ್ಮೂರ ದ್ಯಾವಪ್ಪ ಬಿಡುಗಡೆ ಮಾಡಿದರು.
ಉಪನ್ಯಾಸಕ ಹಾಗೂ ಲೇಖಕ ಫೈಯಜ್ ಫಾಷ ಎಂಬುವವರು ಬರೆದಿರುವ ಈ ಪುಸ್ತಕವನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಹರದನಹಳ್ಳಿಯಿಂದ ದಿಲ್ಲಿಯವರೆಗೆ ಮಣ್ಣಿನ ಮಗನ ಸಾಧನೆ ಕುರಿತು ಪುಸ್ತಕದಲ್ಲಿ ಅನಾವರಣ ಮಾಡಲಾಗಿದೆ.