ಓವೆಲ್: ವಿದಾಯದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟರ್ ಕುಕ್ ಹಲವಾರು ದಾಖಲೆಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಕೊನೆಯ ಇನ್ನಿಂಗ್ಸ್ ನಲ್ಲಿ ಆಲಿಸ್ಟರ್ ಕುಕ್ 147 ರನ್ ಸಿಡಿಸುವ ಮೂಲಕ ಟೆಸ್ಟನ ಪದಾರ್ಪಣೆ ಪಂದ್ಯ ಮತ್ತು ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವ ಕ್ರಿಕೆಟ್‍ನ ಐದನೇ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಮೊದಲ ಮತ್ತು ಕೊನೆಯ ಟೆಸ್ಟ್‍ನಲ್ಲಿ ಶತಕ ಬಾರಿಸಿದವರು
ಬ್ಯಾಟ್ಸ್ ಮನ್ ದೇಶ ಮೊದಲ ಪಂದ್ಯ ಕೊನೆಯ ಪಂದ್ಯ
ರೆಗ್ಗಿ ಡಫ್ ಆಸ್ಟ್ರೇಲಿಯಾ 104 146
ಬಿಲ್ ಪಾನ್ಸ್‍ಫೊರ್ಡ್ ಆಸ್ಟ್ರೇಲಿಯಾ 110 266
ಗ್ರೇಗ್ ಚಾಪೆಲ್ ಆಸ್ಟ್ರೇಲಿಯಾ 108 182
ಮೊಹ್ಮದ್ ಅಜರುದ್ದೀನ್ ಭಾರತ 110 102
ಆಲಿಸ್ಟರ್ ಕುಕ್ ಇಂಗ್ಲೆಂಡ್ 104 101
2ನೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕುಕ್
ಟೀಂ ಇಂಡಿಯಾ ವಿರುದ್ಧ ಶತಕ ಬಾರಿಸುವ ಮೂಲಕ ಆಲಿಸ್ಟರ್ ಕುಕ್ ಎರಡನೇ ಇನ್ನಿಂಗ್ಸನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಟೆಸ್ಟ್ ಕ್ರಿಕೆಟ್‍ನ ಮೊದಲ ಬ್ಯಾಟ್ಸ ಮನ್ ಎಂಭ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಶ್ರೀಲಂಕಾ ತಂಡದ ಕುಮಾರ ಸಂಗಕ್ಕಾರ 14 ಶತಕ ಬಾರಿಸಿದ್ದರು.ಇದೀಗ ಆ ದಾಖಲೆಯನ್ನ ಕುಕ್ ಅಳಿಸಿ ಹಾಕಿದ್ದಾರೆ.
ಪ್ರತಿ ಇನ್ನಿಂಗ್ಸ್ ನಲ್ಲಿ ಅತಿ ಶತಕ ಹೊಡೆದವರು
ಮೊದಲ ಇನ್ನಿಂಗ್ಸ್ ರಿಕಿ ಪಾಟಿಂಗ್ 21
ಎರಡನೇ ಇನ್ನಿಂಗ್ಸ್ ಸಚಿನ್ ತೆಂಡೂಲ್ಕರ್ 18
ಮೂರನೇ ಇನ್ನಿಂಗ್ಸ್ ಆಲಿಸ್ಟರ್ ಕುಕ್ 13
ನಾಲ್ಕನೆ ಇನ್ನಿಂಗ್ಸ್ ಯೂನಿಸ್ ಖಾನ್ 5
ಭಾರತ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ಅಂಗ್ಲ ಬ್ಯಾಟ್ಸ್‍ಮನ್
ಕುಕ್ ಕೊಹ್ಲಿ ಪಡೆ ವಿರುದ್ದ ಆಕರ್ಷಕ ಶತಕ ಬಾರಿಸುವ ಮೂಲಕ ಭಾರತ ವಿರುದ್ಧ ಟೆಸ್ಟನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ತಂಡದ ಮೊದಲ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಕುಕ್ ಪಾತ್ರರಾಗಿದ್ದಾರೆ. ಆಲಿಸ್ಟರ್ ಕುಕ್ ಕೊನೆಯ ಇನ್ನಿಂಗ್ಸ ನಲ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ವಿರುದ್ಧ 7 ಶತಕ ಬಾರಿಸಿದ ಸಾಧನೆ ಮಾಡಿದರು. ಈ ಹಿಂದೆ ಕೆವಿನ್ ಪೀಟರ್ಸನ್ 6 ಮತ್ತು ಇಯಾನ್ ಬಾಥಮ್ ಮತ್ತು ಗ್ರಾಹಂ ಗೂಚ್ ತಲಾ 5 ಶತಕ ಬಾರಿಸಿದವರಾಗಿದ್ದಾರೆ.