ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ 90. 11 ಪೈಸೆಗೆ ಏರಿಕೆಯಾದ ಪೆಟ್ರೋಲ್ ಬೆಲೆ

ಪರ್ಬಾನಿ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದರ ಏರಿಕೆ ಗಗನಮುಖಿಯಾಗುತ್ತಲೇ ಇದ್ದು, ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಲೀ. ಪೆಟ್ರೋಲ್ ಬೆಲೆ 90. 11 ಪೈಸೆಗೆ ಏರಿಕೆ ಆಗುವ ಮೂಲಕ ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ಡೀಸೆಲ್ ಬೆಲೆ ಕೂಡಾ 77.92 ರಿಂದ 78.06 ರಷ್ಟು ಇಂದು ಏರಿಕೆಯಾಗಿದೆ ಎಂದು ಜಿಲ್ಲಾ ಪೆಟ್ರೋಲ್ ಡೀಲರ್ಸ್ ಅಸೊಸಿಯೇಷನ್ ಅಧ್ಯಕ್ಷ ಸಂಜಯ್ ದೇಶ್ ಮುಖ್ ತಿಳಿಸಿದ್ದಾರೆ.

ಮರಾಠವಾಡ ವಲಯದಲ್ಲಿರುವ ಪಶ್ಚಿಮ ಮುಂಬೈಯ ಪರ್ಬಾನಿ ನಗರದಲ್ಲಿ 3 ಲಕ್ಷದ 10 ಸಾವಿರ ಜನಸಂಖ್ಯೆ ವಾಸಿಸುತ್ತಿದ್ದು, ನಿನ್ನೆ ಲೀಟರ್ ಪೆಟ್ರೋಲ್ ಬೆಲೆ 89. 97 , ಡೀಸೆಲ್ ಬೆಲೆ 77.92 ರೂ. ಆಗಿತ್ತು.

10 ದಿನಗಳ ಗಣೇಶೋತ್ಸವ ಆಚರಣೆಗೆ ಇನ್ನೆರಡು ದಿನ ಬಾಕಿ ಇರುವಂತೆಯೇ ಸತತ 15 ನೇ ದಿನವಾದ ಇಂದು ಕೂಡಾ ಪೆಟ್ರೋಲ್ ಬೆಲೆಯಲ್ಲಿ 0.14 ಹಾಗೂ ಡೀಸೆಲ್ ಬೆಲೆಯಲ್ಲಿ 0.15 ರಷ್ಟು ದರ ಏರಿಕೆಯಾಗಿದೆ. ಮತ್ತೊಂದು ನಗರವಾದ ನಾಂದೆಡ್ ನಲ್ಲಿ ಲೀ. ಪೆಟ್ರೋಲ್ 89. 93 ಹಾಗೂ ಡೀಸೆಲ್ 77. 90 ರಷ್ಟಿದೆ. ಅಮರಾವತಿಯಲ್ಲಿ ಪೆಟ್ರೋಲ್ 89. 93 , ಡೀಸೆಲ್ 78. 84 ರೂ. ನಷ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ