ಕಣಿವೆಗೆ ಉರುಳಿದ ಬಸ್: 52 ಮಂದಿ ಸಾವು

ಹೈದರಾಬಾದ್‌: ಸಾರಿಗೆ ನಿಗಮದ ಬಸ್ ವೊಂದು ಕಣಿವೆಗೆ ಉರುಳಿ ಬಿದ್ದ ಪರಿಣಾಮ ಮಕ್ಕಳು ಸೇರಿ 52 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ತೆಲಂಗಾಣದ ಜಗ್ತಿಯಲ್‌ ಜಿಲ್ಲೆಯಲ್ಲಿ ನಡೆದಿದೆ.

ಕೊಂಡಗಟ್ಟುವಿನಿಂದ ಜಗ್ತಿಯಲ್‌ಗೆ ವಾಪಸ್ ಆಗುತ್ತಿದ್ದ ಬಸ್ ಶನಿವಾರಪೇಟೆ ಗ್ರಾಮದ ಬಳಿಯ ಘಟ್ಟದ ರಸ್ತೆಯಲ್ಲಿ ಕಣಿವೆಗೆ ಉರುಳಿ ಬಿದ್ದಿದೆ. ಬಸ್‌ನಲ್ಲಿ 40 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಬೆಳಗ್ಗೆ 11.45ರ ವೇಳೆಗೆ ಘಟನೆ ನಡೆದಿದ್ದು, 65ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಇದ್ದರು. ಘಟನೆಯಲ್ಲಿ ಗಾಯಗೊಂಡವರನ್ನು ಜಗತಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರದಲ್ಲಿ ಬಹುತೇಕರು ಮಕ್ಕಳು ಹಾಗೂ ಮಹಿಳೆಯರಾಗಿದ್ದಾರೆ.

ಚಾಲಕ ಸ್ಪೀಡ್ ಬ್ರೇಕರ್ ಗಮನಿಸಿದೆ ಬಸ್ ಚಾಲನೆ ಮಾಡುತ್ತಿದ್ದ. ಈ ವೇಳೆ ಬಸ್ ಮೇಲಿದ್ದ ನಿಯಂತ್ರಣ ಕಳೆದುಕೊಂಡಿದ್ದ. ಬಳಿಕ ಬಸ್ ಪಲ್ಟಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ