ಬೆಂಗಳೂರು, ಸೆ.10- ಆನ್‍ಲೈನ್ ಮೂಲಕ ವಸ್ತು, ಉಪಕರಣಗಳನ್ನು ಬಾಡಿಗೆಗೆ ನೀಡುವ ಭಾರತ ಮತ್ತು ಯುಎಇ ದೇಶಗಳ ಪ್ರಮುಖ ಸಂಸ್ಥೆಯಾದ ರೆಂಟ್ ಷೇರ್, ಅತ್ಯಧಿಕ ಗುಣಮಟ್ಟದ ಮತ್ತು ವಿವಿಧ ಸಂಸ್ಥೆಗಳ ಲ್ಯಾಪ್‍ಟಾಪ್‍ಗಳನ್ನೂ ಬಾಡಿಗೆಗೆ ನೀಡಲು ನಿರ್ಧರಿಸಿದೆ.
ಸಂಸ್ಥೆಯು ಈಗಾಗಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬೇಕಾಗುವ ಡಿಜಿಟಲ್ ಉಪಕರಣಗಳನ್ನು ಬಾಡಿಗೆಗೆ ನೀಡುತ್ತಿದ್ದು, ಲ್ಯಾಪ್‍ಟಾಪ್‍ಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿದೆ. ಇದರಲ್ಲಿ ಕ್ಷೆಯಾನ್, ಆಪ್ಯಲ್ ಮ್ಯಾಕ್ ಬುಕ್‍ನಂತಹ ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಗಳನ್ನು ವಿಶ್ವಾಸಾರ್ಹ ಗ್ರಾಹಕರಿಗೆ ಬಾಡಿಗೆಗೆ ನೀಡಲಿದೆ.
ಅಧಿಕ ಗುಣಮಟ್ಟದ ಉಪಕರಣಗಳನ್ನು ಕಡಿಮೆ ಮೊತ್ತದ ಬಾಡಿಗೆ ನೀಡುವುದರ ಜೊತೆಗೆ ತಂತ್ರಜ್ಞಾನ ಸೌಲಭ್ಯ ಒದಗಿಸುವುದಕ್ಕೂ ರೆಂಟ್ ಷೇರ್ ಮುಂದಿದೆ. ಇದರ ಮೂಲಕ ವೃತ್ತಿಪರರು ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.
ರೆಂಟ್ ಷೇರ್ ಸಮೀಕ್ಷೆ ನಡೆಸಿದೆ ಪ್ರಕಾರ, ಹಲವು ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ದಿಮೆಗಳು ಬಂಡವಾಳವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಲ್ಯಾಪ್ ಟಾಪ್‍ಗಳನ್ನು ಖರೀದಿಗೆ ಹಣ ಹೂಡಲು ಇಷ್ಟಪಡುತ್ತಿಲ್ಲ. ಹೀಗಾಗಿ ಬಾಡಿಗೆ ಲ್ಯಾಪ್‍ಟಾಪ್‍ಗಳಿಗಾಗಿ ಹೆಚ್ಚು ಬೇಡಿಕೆ ಕೇಳಿ ಬರುತ್ತಿದೆ. ಇವರಷ್ಟೇ ಅಲ್ಲದೇ, ಸ್ವಯಂ-ಕೆಲಸಗಾರರು, ಕನ್ಸಲ್ಟೆಂಟ್ ಕೆಲಸಗಾರರು, ಸೀಮಿತಾವಧಿಗೆ ಪ್ರಾಜೆಕ್ಟ್‍ಗಳನ್ನು ಮಾಡುವವರು, ಮತ್ತು ಸುಮಾರು 9-5 ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವವರು, ಹೆಚ್ಚುವರಿ ಉದ್ದಿಮೆ ನಡೆಸುತ್ತಿರುವವರಿಗೆ ಕಡಿಮೆ ಬಾಡಿಗೆ ದರಕ್ಕೆ ರೆಂಟ್ ಷೇರ್ ಸಂಸ್ಥೆ ಒದಗಿಸುತ್ತಿರುವ ಈ ಸೇವೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೇ ಅಧಿಕ ಗುಣಮಟ್ಟದ ಲ್ಯಾಪ್ ಟಾಪ್‍ಗಳು ಲಭಿಸುವುದರ ಜೊತೆಗೆ ಎಷ್ಟು ಅವಧಿಗೆ ಬೇಕೊ ಅಷ್ಟರ ಮಟ್ಟಿಗೆ ಬಾಡಿಗೆಗೆ ಪಡೆಯುವ ಸೌಲಭ್ಯವೂ ಇದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಸ್ತುತ ರೆಂಟ್ ಷೇರ್ ಸಂಸ್ಥೆಯು ದೇಶದಾದ್ಯಂತ 10 ಪ್ರಮುಖ ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿದೆ. ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹೆಚ್ಚು ಸಕ್ರಿಯವಾಗಿರುವ ಬೆಂಗಳೂರು, ಹೈದರಾಬಾದ್, ದೆಹಲಿ ಮುಂಬೈ ನಂತಹ ನಗರಗಳಲ್ಲಿ ಈ ಸೌಲಭ್ಯವಿದೆ.