ಬೆಂಗಳೂರು, ಸೆ.10- ಭಾರತ್ ಬಂದ್ನಿಂದಾಗಿ ಕೆಎಸ್ಆರ್ಟಿಸಿ ಈಶಾನ್ಯ ಮತ್ತು ನೈಋತ್ಯ ರಸ್ತೆ ಸಾರಿಗೆಗೆ ಸುಮಾರು 15 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ.
ಮಂಗಳೂರಿನಲ್ಲಿ ಕೆಎಸ್ಆರ್ಟಿಸಿಯ ಸ್ಲೀಪರ್ ಕೋಚ್ ಬಸ್ಗೆ ಕಲ್ಲು ತೂರಾಟ ನಡೆಸಿದರೂ ಬಿಟ್ಟರೆ ಬೇರೆಲ್ಲೂ ಮಧ್ಯಾಹ್ನದವರೆಗೆ ಅಂತಹ ಘಟನೆಗಳು ನಡೆದಿಲ್ಲ.
ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಡಿಪೆÇೀಗಳಲ್ಲೂ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ.
ರಾತ್ರಿ ವಿವಿಧ ಕಡೆಗಳಿಂದ ಹೊರಟಿರುವ ಬಸ್ ನಿಗದಿತ ಸ್ಥಳಕ್ಕೆ ತಲುಪಿದ ನಂತರ ಪ್ರಯಾಣಿಕರನ್ನು ಇಳಿಸಿ ನೇರವಾಗಿ ಆಯಾ ಘಟಕಗಳಿಗೆ ತೆರಳುತ್ತಿದೆ. ಸಿಬ್ಬಂದಿಗಳು ಹಾಜರಾದರೂ ಕೂಡ ಕೆಲವೆಡೆ ಬಸ್ಗಳು ರಸ್ತೆಗಿಳಿಯಲಿಲ್ಲ.
ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಿಗೂ ಯಾವುದೇ ಬಸ್ ಸೇವೆಯೂ ಕೂಡ ಆರಂಭಿಸಿಲ್ಲ. ಮುಂಗಡ ಬುಕಿಂಗ್ ಕೂಡ ರದ್ದು ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.