ನವದೆಹಲಿ: ಅಮೆರಿಕ ಮೂಲದ ಕೋಕಾ ಕೋಲಾ ಸಂಸ್ಥೆ ಗ್ಲ್ಯಾಕ್ಸೊ ಸ್ಮಿತ್ ಕ್ಲೈನ್ ಸಂಸ್ಥೆಯ ಮಾಲ್ಟ್ ರೂಪದ ಆರೋಗ್ಯ ಪೇಯ ಉತ್ಪನ್ನ ಹಾರ್ಲಿಕ್ಸ್ ಅನ್ನು ಖರೀದಿಸುವ ರೇಸ್ ನಲ್ಲಿದೆ.
ಬ್ರಿಟನ್ ಮೂಲದ ಸಂಡೇ ಟೆಲಿಗ್ರಾಫ್ ಈ ಸಂಬಂಧ ವರದಿ ಮಾಡಿದ್ದು ಭಾರತದಲ್ಲಿ ಜನಪ್ರಿಯ ಪೇಯವಾದ ಹಾರ್ಲಿಕ್ಸ್ ಅನ್ನು ಕೋಕಾ ಕೋಲಾ ಸುಮಾರು ಮೂರು ಶತಕೋಟಿ ಬ್ರಿಟಿಷ್ ಪೌಂಡುಗಳಷ್ಟು ಬೆಲೆ ನೀಡಿ ಖರೀದಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
145 ವರ್ಷ ಹಳೆಯದಾದ ಗ್ಲ್ಯಾಕ್ಸೊ ಸ್ಮಿತ್ ಕ್ಲೈನ್ ಸಂಸ್ಥೆ ಹಾರ್ಲಿಕ್ಸ್ ಉತ್ಪನ್ನದ ಜನಪ್ರಿಯತೆಯಿಂದ ಮೂರು ಶತಕೋಟಿ ಬ್ರಿಟಿಷ್ ಪೌಂಡ್ಸ್ ಅಥವಾ 3.9 ಶತಕೋಟಿ ಅಮೆರಿಕನ್ ಡಾಲ ಬೆಲೆ ಬಾಳುತ್ತಿದೆ.
ಕೋಕಾ ಕೋಲಾ ಮಾತ್ರವಲ್ಲದೆ ಸಾಫ್ಟ್ ಡ್ರಿಕ್ಸ್, ಆರೋಗ್ಯ ಪೇಯ ಉತ್ಪಾದನಾ ಮಾರುಕಟ್ಟೆಯ ದೈತ್ಯ ಸಂಸ್ಥೆಗಳು ಸಹ ಗ್ಲ್ಯಾಕ್ಸೊ ಸ್ಮಿತ್ ಕ್ಲೈನ್ ನಿಂದ ಹಾರ್ಲಿಕ್ಸ್ ಖರೀದಿಸಲು ಉತ್ಸುಕರಾಗಿದ್ದಾರೆ.
“ನಾವು ಈಗಲೇ ಏನನ್ನೂ ಹೇಳುವುದಿಲ್ಲ. ಈ ಕುರಿತಂತೆ ಏನನ್ನೂ ವರದಿ ಮಾಡಬೇಕಾಗಿಲ್ಲ” ಎಂದು ಕೋಕಾ ಕೋಲಾ ಸಂಸ್ಥೆ ತನ್ನ ಈ ಮೇಲ್ ನಲ್ಲಿ ಹೇಳಿದೆ.
ಅಟ್ಲಾಂಟಾ ಮೂಲದ ಕೋಲಾ ಇತ್ತೀಚೆಗೆ ಯುಕೆ ಮೂಲದ ವೈಟ್ ಬ್ರೆಡ್ ಸಂಸ್ಥೆಯಿಂದ ಕೋಸ್ಟಾ ಕಾಫಿ ಬ್ರ್ಯಾಂಡ್ ಅನ್ನು 5 ಬಿಲಿಯನ್ ಅಮೆರಿಕನ್ ಡಾಲರ್ ನಿಡಿ ಖರೀದಿಸಿದೆ.
ಈ ಒಪ್ಪಂದವು ಜಾರಿಯಾದರೆ ಭಾರತೀಯ ಪೇಯ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕೋಕಾ-ಕೋಲಾ ಇನ್ನಷ್ಟು ನಿಯಂತ್ರಣ ಸಾಧಿಸಲು ನೆರವಾಗಲಿದೆ.ಥಮ್ಸ್ ಅಪ್, ಲಿಂಕಾ ಮತ್ತು ಗೋಲ್ಡ್ ಸ್ಪಾಟ್ ನಂತಹಾ ಮೃದು ಪಾನೀಯಗಳ ಬ್ರ್ಯಾಂಡ್ ಖರೀದಿಸಿದ ಬಳಿಕ ಕೋಲಾ ಭಾರತೀಯ ಪಾನೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರಾಗಿದೆ.
ಗ್ಲ್ಯಾಕ್ಸೊ ಸ್ಮಿತ್ ಕ್ಲೈನ್ ಒಡೆತನದ ಹಾರ್ಲಿಕ್ಸ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಆರೋಗ್ಯ ಪೇಯಗಳಲ್ಲಿ ಒಂದಾಗಿದೆ. ಹಾರ್ಲಿಕ್ಸ್ ಅ 72.5 ಶೇ ಪಾಲನ್ನು ಸಂಸ್ಥೆ ತನ್ನ ವಶದಲ್ಲಿರಿಸಿಕೊಂಡಿದೆ.