ಕಾಯಕ ನಿಷ್ಠೆಯ ಜತೆಗೆ ದೈವಾನುಗ್ರಹವಿದ್ದರೆ ಯಶಸ್ಸು ಪ್ರಾಪ್ತಿ: ಆದಿತ್ಯನಂದನ್ ಗುರೂಜಿ ಅಭಿಪ್ರಾಯ

Varta Mitra News

ಬೆಂಗಳೂರು, ಸೆ.10- ಕಾಯಕ ನಿಷ್ಠೆಯ ಜತೆಗೆ ದೈವಾನುಗ್ರಹವಿದ್ದರೆ ಮನುಷ್ಯನಿಗೆ ಯಶಸ್ಸು ನಿರಾಯಾಸವಾಗಿ ಪ್ರಾಪ್ತಿಯಾಗುತ್ತದೆ ಎಂದು ಛಾಯಾದೇವಿ ಕ್ಷೇತ್ರದ ಆದಿತ್ಯನಂದನ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ತಾವರೆಕೆರೆ ಸಮೀಪದ ಹೊಸಕೆರೆ ಛಾಯಾದೇವಿ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕದಂಬಿನಿ ಸಾಂಸ್ಕøತಿಕ ಅಕಾಡೆಮಿ ಟ್ರಸ್ಟ್ ಉದ್ಘಾಟನೆ ಹಾಗೂ ಕದಂಬಿನಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಎಲ್ಲಿ ಅರಸುವೇ ನೀನು ಕಿಂಕರನೇ ನಿನ್ನ ಬಳಿಯೇ ವಾಸಿಸುವೆನು ಎನ್ನುವ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಗುರೂಜಿ, ಭಗವಂತನನ್ನು ಒಲಿಸಿಕೊಳ್ಳಲು ಮೇಲು-ಕೀಳು, ಬಡವ-ಬಲ್ಲಿದ ಎಂಬ ಭೇದ-ಭಾವವಿಲ,್ಲ ಶ್ರದ್ಧೆ ಭಕ್ತಿ ಇದ್ದರೆ ಸಾಕು ಎಂದು ನುಡಿದರು.

ಗಾಯಕ ಜೋಗಿಲ ಸಿದ್ದರಾಜು ಮಾತನಾಡಿ, ಆಧ್ಯಾತ್ಮಕ್ಕೂ, ವಿಜ್ಞಾನಕ್ಕೂ ಅವಿನಾವಭಾವ ಸಂಬಂಧವಿದೆ. ದೇವಸ್ಥಾನಗಳು ಸ್ಥಳ ಮಹಿಮೆಯ ಹಿರಿಮೆಯಿಂದ ಮನುಷ್ಯರಲ್ಲಿ ಸಕರಾತ್ಮಕ ಭಾವನೆಗಳನ್ನು ಸೃಷ್ಟಿಸುವ ಮೂಲಕ ಶಾಂತಿ, ನೆಮ್ಮದಿ ಒದಗಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಪಾಲಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದರೆ ಸಾಲದು ಸಂಸ್ಕಾರ ಕೊಡದಿದ್ದರೆ ವೃದ್ಧಾಶ್ರಮ, ಅನಾಥಶ್ರಮಗಳಲ್ಲಿ ತಮ್ಮ ಸಂಧ್ಯಾಕಾಲವನ್ನು ಕಳೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂತವಾಣಿ ಸುಧಾಕರ್, ಜೋಗಿಲ ಸಿದ್ದರಾಜು, ನಾಗೇಶ್, ಸಿದ್ದಯ್ಯ ದತ್ತಶ್ರೀ, ಆಶಾ ಹಾಡ್ಯಳು ಮತ್ತಿತರರು ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಗಳನ್ನು ಹಾಡುವ ಮೂಲಕ ಸಂಗೀತೋತ್ಸವ ಕಳೆಗಟ್ಟುವಂತೆ ಮಾಡಿದರು. ಕಿರಣ್, ನಾಗರಾಜ್, ಪವನ್, ಗೋವಿಂದರಾಜು ಹಾಗೂ ತ್ಯಾಗರಾಜ್ ವಾದ್ಯ ಸಹಕಾರ ನೀಡಿದರು.

ಉಪನ್ಯಾಸಕ ಮಾಗಡಿ ರಂಗಯ್ಯ, ಗಾಯಕ ಸಂತವಾಣಿ ಸುಧಾಕರ್, ಪತ್ರಕರ್ತ ನರಸಿಂಹಮೂರ್ತಿ ಮತ್ತಿತರ ಸಾಧಕರನ್ನು ಸನ್ಮಾನಿಸಲಾಯಿತು.
ಅರುಣೋದಯ ಎಜುಕೇಷನಲ್ ಟ್ರಸ್ಟ್‍ನ ಅನಿಲ್‍ಕುಮಾರ್ ಕಟ್ಟಿ, ಕದಂಬಿನಿ ಸಾಂಸ್ಕøತಿಕ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ತುಳಸಿ ಪ್ರಿಯ, ಮುಖಂಡ ತಿಮ್ಮರಾಜು, ಪ್ರಾಂಶುಪಾಲ ಚಿಕ್ಕ ಮುನಿಯಪ್ಪ, ಬೆಸ್ಕಾಂ ಗಂಗರುದ್ರಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ