ಮಕ್ಕಳನ್ನು ಸತ್ತ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ: ಪಿ.ಬಿ.ಮಹಿಷಿ

ಬೆಂಗಳೂರು, ಸೆ.9- ಯಾವುದೇ ಒಂದು ರಾಷ್ಟ್ರದ ಭವ್ಯ ಭವಿಷ್ಯತ್ ನಿರ್ಧಾರವಾಗುವುದು ಶಾಲಾ ತರಗತಿಗಳಲ್ಲಿ. ಮಕ್ಕಳನ್ನು ಸತ್ತ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ಅಭಿಪ್ರಾಯಪಟ್ಟರು.
ಭಾರತೀಯ ಶಿಕ್ಷಣ ಸಮಿತಿಯ ಗಾಂಧಿನಗರದ ಪ್ರೌಢಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸನ್ಮಾನ ಸಮಾರಂ¨s ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಜೀವಂತ ನಿಧಿಯಾದ ಮಾನವ ಸಂಪನ್ಮೂಲದೊಂದಿಗೆ ವ್ಯವಹರಿಸುವ ಶಿಕ್ಷಣ ಸಂಸ್ಥೆಗಳು ಬಹುಮುಖ್ಯವಾದ ಉತ್ಪಾದಕ ವಲಯ ಎಂದರು.

ನಿವೃತ್ತ ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಎಸ್.ಟಿ. ರಮೇಶ್ ಮಾತನಾಡಿ, ಗಾಂಧಿನಗರದ ಪ್ರೌಢಶಾಲೆಯಲ್ಲಿ ಉತ್ತಮ ಗುರುಗಳಿದ್ದರು. ಹೀಗಾಗಿ ಕಲಿಕೆಗೂ ಸಹಕಾರಿಯಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಶಾಲೆಯ ಮೊದಲ ವಿದ್ಯಾರ್ಥಿ ಡಿ.ಗಂಗಾಧರ ಶಾಸ್ತ್ರಿ ಮಾತನಾಡಿ, ತಮ್ಮ ಶಾಲಾ ದಿನಗಳನ್ನು ಹಾಗೂ ಆಗಿನ ಕಾಲದಲ್ಲಿ ಇದ್ದ ಗುರು ಶಿಷ್ಯರ ಸಂಬಂಧವನ್ನು ಮೆಲುಕು ಹಾಕಿದರು.

ಇದಕ್ಕೂ ಮುನ್ನ ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿ ಖ್ಯಾತ ವೈದ್ಯ ಡಾ. ಕೆ.ಎಸ್. ಅಶೋಕ್, ಶಾಲಾ ಮುಖ್ಯೋಪಾಧ್ಯಾಯಿನಿ ಆರ್. ಹೇಮಲತಾ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ