ಮೂರು ಪದಕ ವಿಜೇತ ರನ್ನರ್​ಗೆ ಸರ್​​ಪ್ರೈಸ್​….! ಅಭಿಮಾನಿಗಳ ಆ ಗಿಫ್ಟ್​ ಏನು…?

ಗುವಾಹಟಿ: ಏಷ್ಯನ್ಸ್​ ಗೇಮ್ಸ್​ನಲ್ಲಿ ಈ ಬಾರಿ ಭಾರತದ ಅಥ್ಲೀಟ್​ಗಳು ಮೇರು ಸಾಧನೆ ಮಾಡಿದ್ದಾರೆ. ಅದರಲ್ಲೂ ಚಿನ್ನದ ಪದಕ ವಿಜೇತೆ ಹಿಮಾದಾಸ್​ ಮೂರು ಪದಕಗಳನ್ನ ಮುಡಿಗೇರಿಸಿಕೊಳ್ಳುವ ಮೂಲಕ ಅಸ್ಸೋಂಗೆ ಆ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಅಸ್ಸೋಂ ಸರ್ಕಾರ ಹಾಗೂ  ಅವರ ಅಭಿಮಾನಿಗಳು ಸ್ವದೇಶಕ್ಕೆ ಆಗಮಿಸಿದ ಚಿನ್ನದ ಓಟಗಾರ್ತಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲ ಸ್ಪೆಷಲ್​ ಸರ್​​ಪ್ರೈಸ್​ ಅನ್ನೂ ನೀಡಿದರು.   ಹಿಮಾದಾಸ್​ಗಾಗಿ ಗುವಾಹಟಿ ಏರ್​ಪೋರ್ಟ್​​ನಲ್ಲಿ 1,2,3,4,5,6 ಹೀಗೆ ರನ್ನಿಂಗ್​ ಟ್ರ್ಯಾಕ್​ಗಳನ್ನೇ ನಿರ್ಮಾಣ ಮಾಡಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.

ಈ ವೇಳೆ ಗಂಟೆಗೂ ಹೆಚ್ಚು ಕಾಲ ಕಾದ ಸಿಎಂ ಸರ್ಬಾನಂದ ಸೋನೋವಾಲ್​ ಹಾಗೂ ಹಣಕಾಸು ಸಚಿವ ಹಿಮಂತ ಬಿಸ್ವಾ ಸರ್ಮಾ ಹಾಗೂ ಸಾವಿರಾರು ಅಭಿಮಾನಿಗಳು ಹಿಮಾದಾಸ್​ಗೆ ಅದ್ದೂರಿ ಸ್ವಾಗತ ಕೋರಿದರು.
ಆ ಬಳಿಕ ಸಿಎಂ ಸಮ್ಮುಖದಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರಮ ನಡೆಸಿ, ಚಿನ್ನದ ಓಟಗಾರ್ತಿಗೆ 1.6 ಕೋಟಿ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ನಡುವೆ ಹಿಮಾದಾಸ್​ ಅವರ ಹುಟ್ಟುರಾದ ನಾಗೋನ್​ ಜಿಲ್ಲೆಯ ಕಂದೂಲಮರಿ ಗ್ರಾಮದ ದಿಂಗಾದಲ್ಲಿ  ಅಥ್ಲೀಟ್​ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು  ಅಸ್ಸೋಂ ನೀರಾವರಿ ಸಚಿವ ಕೇಶವ್​ ಮಹಾಂತ ಅವರು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ