ಮನೋರಥ ಚಿತ್ರಕ್ಕೆ ಸಾಫ್ಟ್ ವೇರ್ ಎಂಜಿನೀಯರ್ ಅಂಜಲಿ ನಾಯಕಿ

ಬೆಂಗಳೂರು: ಮನೋರಥ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ  ಅಂಜಲಿ ಓದಿರುವುದು ಎಂಜಿನಿಯರಿಂಗ್ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ ನಟನೆ ಎನ್ನುವುದು ಅವರ ಮನಸಿಗಂಟಿಕೊಂಡಿದ್ದ ವ್ಯಾಮೋಹ. ಕಂಪ್ಯೂಟರ್ ಕೀಲಿಮಣೆಯ ಮೇಲೆ ಆಡುತ್ತಿದ್ದ ಬೆರಳುಗಳು ಕಲೆಯ ಸ್ಪರ್ಶಕ್ಕಾಗಿ ಸದಾ ಹಾತೊರೆಯುತ್ತಿದ್ದವು.
ಅಂಜಲಿ ಕನಸಿನ ಬೆನ್ನು ಹತ್ತಿಯೇ ಅವರು ತಮ್ಮ ವೃತ್ತಿಗೆ ಟಾಟಾ ಹೇಳಿ ನಿರೂಪಕಿಯಾಗಿ ಕೆಲಸ ಆರಂಭಿಸಿದರು. ಮಾತು ಅವರಿಗೆ ಸಹಜವಾಗಿ ಒಲಿದ ಕಲೆಯಾಗಿತ್ತು. ಹಾಗಾಗಿ ನಿರೂಪಕಿಯಾಗಿ ಕೆಲಸ ಗಿಟ್ಟಿಸಿಕೊಳ್ಳುವುದು ಅವರಿಗೆ ಕಷ್ಟವೇನೂ ಆಗಲಿಲ್ಲ. ಜತೆಗೆ ಅಂಜಲಿಗೆ ನೃತ್ಯವೂ ಗೊತ್ತು. ಭರತನಾಟ್ಯ ಮತ್ತು ಸಮಕಾಲೀನ ನೃತ್ಯವನ್ನು ಅಭ್ಯಸಿಸಿದ್ದಾರೆ.
ಅಂಜಲಿ ನಟಿಸಿದ ಮೊದಲ ಚಿತ್ರ ‘ರನ್ ಆಯಂಟನಿ’. ಈ ಚಿತ್ರದಲ್ಲಿ ಫೋಷಕ ಪಾತ್ರದಲ್ಲಿ ಅವರು ನಟಿಸಿದ್ದರು. ‘ಕಿರುಗೂರಿನ ಗಯ್ಯಾಳಿಗಳು’, ಮತ್ತು ‘ನಂಗಿಷ್ಟ’ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ.
ಎಂ. ಪ್ರಸನ್ನ ಕುಮಾರ್ ಅವರ ನಿರ್ದೇಶಿಸಿ ನಿರ್ಮಿಸುತ್ತಿರುವ ‘ಮನೋರಥ’ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರ. ”ಮನೋರಥ’ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಇಲ್ಲಿ ನನ್ನ ಪಾತ್ರಕ್ಕೆ ಎರಡು ಛಾಯೆಗಳಿವೆ. ಮನೋವೈದ್ಯೆಯಾಗಿ ನಟಿಸುತ್ತಿದ್ದೇನೆ. ಹಾಗೆಯೇ ಆ ಪಾತ್ರಕ್ಕೆ ಇನ್ನೊಂದು ನೆಗೆಟೀವ್ ಛಾಯೆಯೂ ಇದೆ. ತುಂಬ ಭಿನ್ನವಾಗಿರುವ ವಿಷಯ ಇಟ್ಟುಕೊಂಡಿರುವ ಚಿತ್ರವಿದು” ಎಂದು ತಮ್ಮ ಚಿತ್ರದ ಕುರಿತು ವಿವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ