ಬೆಂಗಳೂರು, ಸೆ.8- ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಎನ್ನಲಾದ ಸುಧನ್ವ ಗೊಂದಲೇಕರ್ ಎಂಬಾತನನ್ನು ರಾಜ್ಯದ ಎಸ್ಐಟಿ ತಂಡ ವಶಕ್ಕೆ ಪಡೆದಿದೆ.
ಈತ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ಪೆÇಲೀಸರ ಬಲೆಗೆ ಬಿದ್ದಿದ್ದ. ಈತ ಮಹಾರಾಷ್ಟ್ರದ ಸತಾರಾ ನಿವಾಸಿಯಾಗಿದ್ದು, ಗೌರಿ ಹತ್ಯೆ ಪ್ರಕರಣದ 14ನೇ ಆರೋಪಿಯಾಗಿದ್ದಾನೆ. ಈತ ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ರವಾನಿ ಮಾಡಿದ್ದಾನೆ ಎನ್ನಲಾಗಿದೆ. ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಈತನನ್ನು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಆ.10 ರಂದು ಬಂಧಿಸಿದ್ದರು.
ಗೌರಿ ಹತ್ಯೆ ನಡೆದ 2017 ಸೆ.5ರಂದು ಮಧ್ಯಾಹ್ನ ಗೌರಿ ಅವರ ಮನೆ ಬಳಿ ಸುಧನ್ವ, ತನ್ನ ಸಹಚರ ಶರದ್ ಜೊತೆ ಓಡಾಡುವ ದೃಶ್ಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾತ್ರವಲ್ಲ ಗೌರಿ ಹತ್ಯೆಯ ಪ್ರಮುಖ ಆರೋಪಿ ಅಮೋಲ್ ಕಾಳೆಯ ಡೈರಿಯಲ್ಲಿ ಈತನ ಹೆಸರು ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಎಸ್ಐಟಿ ಆಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಗೌರಿ ಹತ್ಯೆಯಾದ ಬಳಿಕ 10 ದಿನಗಳ ಕಾಲ ಗೊಂದಲೇಕರ್ ನಗರದಲ್ಲಿಯೇ ವಾಸವಿದ್ದ. ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲನ್ನು ಪಡೆದುಕೊಂಡ ಈತ ನಂತರ ಅದನ್ನು ಸುರಕ್ಷಿತ ಪ್ರದೇಶದಲ್ಲಿರಿಸಿದ್ದ ಎನ್ನಲಾಗಿದೆ.
ಕಾಳೆ ಡೈರಿಯಲ್ಲಿ ಮತ್ತೊಬ್ಬ ಆರೋಪಿ ಶ್ರೀಕಾಂತ್ ಹೆಸರೂ ಕೂಡ ಇದ್ದು, ಈತನ ವಶಕ್ಕಾಗಿ ಪೆÇಲೀಸರು ಬಲೆ ಬೀಸಿದ್ದಾರೆ. ಅಮೋಲ್ ಕಾಳೆ ನಿರಂತರವಾಗಿ ಶ್ರೀಕಾಂತ್ ಮೊಬೈಲ್ಗೆ ಸಂದೇಶಗಳನ್ನು ಕಳುಹಿಸಿದ್ದು, ಈತನಿಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಬಂಧವಿದೆ ಎಂದು ಶಂಕಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.