ಬೆಂಗಳೂರು, ಸೆ.8- ನಡುರಸ್ತೆಯಲ್ಲಿ ಬೆತ್ತಲೆಯಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನೊಬ್ಬನನ್ನು ಸಾರ್ವಜನಿಕರು ಥಳಿಸಿ ಪೆÇಲಿಸರಿಗೆ ಒಪ್ಪಿಸಿದ ಘಟನೆ ಆರ್.ಟಿ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರ್‍ಟಿನಗರದ ಮಹಮ್ಮದ್ ಸಿದ್ದಿಕ್ ಬಂಧಿತ ಆರೋಪಿ. ಕತ್ತಲಾಗುತ್ತಿದ್ದಂತೆ ಈತ ಬೆತ್ತಲಾಗಿ, ಯುವತಿಯರ ಎದುರು ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ಕುಚೇಷ್ಠೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ನಿನ್ನೆ ಸಂಜೆ ಕೂಡ ಇದೇ ವರ್ತನೆ ಮುಂದುವರಿಸಿದ ಸಿದ್ದೀಕ್‍ನನ್ನು ಸಾರ್ವಜನಿಕರು ಹಿಡಿದು ಥಳಿಸಿ ಆರ್.ಟಿ.ನಗರ ಪೆÇಲೀಸರಿಗೆ ಒಪ್ಪಿಸಿದ್ದಾರೆ. ಪೆÇಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.






