ಭಾರತ್ ಬಂದ್ ಗೆ ಬೆಂಬಲಿಸಿ: ಕಾಂಗ್ರೆಸ್ ಬೈಕ್ ರ್ಯಾಲಿ

ಬೆಂಗಳೂರು: ದೇಶದ ಹಿತಕ್ಕಾಗಿ ಭಾರತ್ ಬಂದ್ ಗೆ ಸಾರ್ವಜನಿಕರು ಬೆಂಬಲಿಸಿ ಮತ್ತು ಮೋದಿ ದುರಾಡಳಿತವನ್ನ ಕೊನೆಗಾಣಿಸಿ ಎಂಬ ಕರೆಯೊಂದಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ಬೈಕ್ ರ್ಯಾಲಿ ನಡೆಸಿತು.

ಬೆಂಗಳೂರು ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಂದು ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಬೃಹತ್ ಬೈಕ್ ರ್ಯಾಲಿ ಯನ್ನು ಕೆ.ಪಿ.ಸಿ.ಸಿ.ಅಧ್ಯಕ್ಷರಾದ ದಿನೇಶ್ ಗುಂಡುರಾವ್ ರವರು ಧ್ವಜಾ ತೋರಿಸುವುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕ.ವಿ.ಕಾ.ಮಾಜಿ ಅಧ್ಯಕ್ಷರಾದ ಎಸ್.ಮನೋಹರ್ ,ಬೆಂಗಳೂರು ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ಧನ್ ಮತ್ತು ಸಲೀಮ್ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ,ಕಾಂಗ್ರೆಸ್ ಮುಖಂಡರಾದ ಪರಿಸರ ರಾಮಕೃಷ್ಣ ,ಆನಂದ್,ಅದಿತ್ಯ ಮಾರನ್ ಶೇಖರ್ ,ಬಾಬು ರವರು ಭಾಗವಹಿಸಿದ್ದರು .500ಕ್ಕೂ ಹೆಚ್ಚು ಬೈಕ್ ಮೂಲಕ ಭಾರತ್ ಬಂದ್ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಷೋಷಣೆಗಳ ಮುಖಾಂತರ ರ್ಯಾಲಿ ಚಾಲನೆಯಾಯಿತು.

ಕೆ.ಪಿ.ಸಿ.ಸಿ.ಅಧ್ಯಕ್ಷರಾದ ದಿನೇಶ್ ಗುಂಡುರಾವ್ ರವರು ಮಾತನಾಡಿ ಕಳೆದ ನಾಲ್ಕುವರೆ ವರ್ಷದಲ್ಲಿ ಬಿ.ಜೆ.ಪಿ.ಕೇಂದ್ರ ಸರ್ಕಾರದ ನರೇಂದ್ರ ಮೋದಿರವರು ಅಚ್ಚದೀನ್ ಅಂತ ಹೇಳಿ ಜನರಿಗೆ ಸುಳ್ಳು ಭರವಸೆ ನೀಡಿದರು .ಜನರ ಮೇಲೆ ತೆರಿಗೆ ಹೆಚ್ಚಳದಿಂದ ಜನ ಸಂಕಷ್ಟದಲ್ಲಿ ಇದ್ದಾರೆ. ಪ್ರೆಟ್ರೂಲ್ ಮತ್ತು ಡೀಸಲ್ ,ಗ್ಯಾಸ್ ಮೇಲೆ ಪ್ರತಿದಿನ ಬೆಲೆ ಏರಿಕೆಯಾಗುತ್ತದೆ ,ನಿಯಂತ್ರಣಕ್ಕೆ ಬರುತ್ತಿಲ್ಲ ,ಇದೆಕ್ಕಲ್ಲ ಕಾರಣ ಕೇಂದ್ರದ ದುರಾಡಳಿತ ಸರ್ಕಾರ,ಇದರ ವಿರುದ್ದ ಹೋರಟ ಮಾಡಲು ಸೋಮವಾರ ಭಾರತ್ ಬಂದ್ ಕರೆ ನೀಡಲಾಗಿದೆ ,ಎಡಪಕ್ಷಗಳು ಹಲವಾರು ಪಕ್ಷಗಳು ಬೆಂಬಲ ನೀಡಿದೆ, ಬೆಂಗಳೂರು ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಂದು ಬೈಕ್ ಮೂಲಕ 28ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ದುರಾಡಳಿತ ಹಾಗೂ ಬೆಲೆ ಏರಿಕೆ ಸಾರ್ವಜನಿಕರಿಗೆ ಜನಜಾಗೃತಿ ಹಾಗೂ ಭಾರತ್ ಬಂದ್ ಗೆ ಸಾರ್ವಜನಿಕರು ಸ್ವಯಂಪೇರಿತರಾಗಿ ಬಂದ್ ಮಾಡುವಂತೆ ಮನವಿ ಮಾಡಲು ತೆರಳುವರು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ