ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಬದಲಾವಣೆ ಮಾಡಿರುವುದನ್ನು ವಾಒಸ್ ಪಡೆಯದೇ ಇದ್ದಲ್ಲಿ ರಾಜ್ಯ ಸರ್ಕಾದ ವಿರುದ್ಧ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ನ್ಯಾಯಾಲಯದ ಮೆಟ್ಟಿಲೇರಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಕ್ಕೂ ಮೊದಲೇ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಒಟ್ಟಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚನೆ ಮೇರಗೆ ಫಲಿತಾಂಶದ ದಿನ ಮಧ್ಯಾಹ್ನ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿತ್ತು.ಆದರೆ ಇದೀಗ ಆ ಪಟ್ಟಿಯನ್ನು ಬದಲಾಯಿಸಿದ.ಬಹಳ ಕಡೆ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇತ್ತು.ಆದರೆ ಮೀಸಲಾತಿ ಬದಲಾಯಿಸಲಾಗಿದೆ.ಇದರಿಂದಾಗಿ ಇಪ್ಪತ್ತಕ್ಕು ಹೆಚ್ಚು ಕಡೆ ಬಿಜೆಪಿ ಅಧಿಕಾರದಿಂದ ದೂರವಿಡಲು ಯತ್ನಿಸಿ ರಾಜಕೀಯ ವೈಷಮ್ಯ ತೀರಿಸಿಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದರು.
12 ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ, ಎರಡು ಉಪಾಧ್ಯಕ್ಷ ಸ್ಥಾನ, 16 ಪುರಸಭೆ ಅಧ್ಯಕ್ಷ ಸ್ಥಾನ 5 ಉಪಾಧ್ಯಕ್ಷ ಸ್ಥಾನ, 4 ಪಟ್ಟಣ ಪಂಚಾಯತ್ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ ಒಟ್ಟಾರೆ 40 ಸ್ಥಾನ ಬದಲಾವಣೆ ಮಾಡಿದ್ದಾರೆ. ಇಲ್ಲಿ ಬಹುತೇಕು ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು. ಬಿಜೆಪಿಯನ್ನು ಅಧಿಕಾರಕ್ಕೆ ದೂರವಿಡಲು ಈ ರೀತಿ ಪಟ್ಟಿ ಬದಲು ಮಾಡಿದೆ.ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಪಟ್ಟಿಯನ್ನು ಹಿಂದಿನಂತೆ ಬದಲಿಸಬೇಕು, ಸಿಎಂ ಮಧ್ಯ ಪ್ರವೇಶಿಸಿ ಹಿಂದಿನಂತೆ ಪಟ್ಟಿಯನ್ನು ಪುನಃ ಪ್ರಕಟಿಸಬೇಕು ಇಲ್ಲವೇ ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ, ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದೆ.ಸರ್ಕಾರದ ಈ ನಿಲುವು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ 12 ಸಾವಿರ ಶಿಕ್ಷಕರಿಗೆ ಕಳೆದ ಆರು ತಿಂಗಳಿನಿಂದ ವೇತನ ನೀಡಿಲ್ಲ, ಇದು ಮುಜುಗರದ ಸಂಗತಿ, ಸರ್ಕಾರ ಶಿಕ್ಷಕರನ್ನು, ಶಿಕ್ಷಣವನ್ನು ಗಮನಿಸುತ್ತಿಲ್ಲ,ಕೂಡಲೇ ವೇತನ ಬಿಡುಗಡೆ ಮಾಡಬೇಕು, ಬಿಡುಗಡೆ ಮಾಡದೇ ಇದ್ದಲ್ಲಿ ಶಿಕ್ಷಕರ ಹಾಗು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಧರಣಿ ನಡೆಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಚನ್ನಗಿರಿ ವೇತನ ರಾಣೆಬೆನ್ನೂರಿಗೆ ಈ ರೀತಿಯಾಗಿ ಅಧಿಕಾರಿಗಳು ಯಾವುದೋ ತಾಲ್ಲೂಕಿನ ವೇತನ ಮತ್ತಾವುದೋ ತಾಲ್ಲೂಕಿಗೆ ಬಿಡುಗಡೆ ಮಾಡಿದ್ದಾರೆ, ಅಧಿಕಾರಿಗಳ ಲೋಪದಿಂದ ಈ ರೀತಿ ಆಗಿದೆ, ಅಧಿಕಾರಿಗಳ ಬೇಜವಾಬ್ದಾಸರಿ, ಶಿಕ್ಷಣ ಸಚಿವರು, ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?.ಸರ್ಕಾರ ಇದ್ದೂ ಇಲ್ಲದಂತಾಗಿದೆ,ಈ ಸರ್ಕಾರ ಜೀವಂತ ಇಲ್ಲ ಅಂತ ಇಂತಹ ಕಾರಣಗಳಿಗಾಗಿಯೇ ನಾವು ಪದೇ ಪದೇ ಹೇಳುತ್ತಿದ್ದೇವೆ, ಬರೀಎಲ್ಲಿ ವರ್ಗಾವಣೆ ಮಾಡಿದರೆ ಹಣ ಸಿಗುತ್ತದೆ, ಯಾವ ಇಲಾಖೆ ಬೆಳಗಾವಿಯಿಂದ ಹಾಸನಕ್ಕೆ ಹೋದರೆ ಹಣ ಬರುತ್ತೆ ಎಂದು ನೋಡುತ್ತಾರೆ, ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಮಾತ್ರ ಸರ್ಕಾರ ಅಂದುಕೊಂಡಿದ್ದಾರೆ.ಇದೊಂದು ಪ್ರಜಾಸತ್ತಾತ್ಮಕ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಸರ್ಕಾರ ಇದನ್ನು ಬಿಜೆಪಿ ಖಂಡಿಸುತ್ತಿದೆ ಎಂದರು.
ಬೆಂಗಳೂರಿನಿಂದ ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರವಾಗಲಿದೆ ಎಂದು ಕಾಂಗ್ರೆಸ್ ಗುಲ್ಲೆಬ್ಬಿಸಿತ್ತು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ ಸ್ಥಳಾಂತರ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರೂ ಕೂಡ ಕೇಳದೆ ಮುಖ್ಯಮಂತ್ರಿ ಕುಮಾರಸ್ವಾಮಿ,ದಿನೇಶ್ ಗುಂಡೂರಾವ್ ಸೇರಿ ಹಲವರು ಅಗೌರವದಿಂದ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದರು.ಈಗ ಏರ್ ಶೋ ಸ್ಥಳಾಂತರ ಇಲ್ಲ ಎಂದು ಅಧಿಕೃತವಾಗಿ ಆದೇಶ ಹೊರಬಿದ್ದಿದೆ.ಈಗ ಕನಿಷ್ಟ ಕ್ಷಮೆಯನ್ನಾದರೂ ಕೇಳುವ ಸೌಜನ್ಯವನ್ನು ತೋರಬೇಕು ಎಂದರು.