ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಮೇಲುಗೈ: ಸಾಹುಕಾರರ ಅಡ್ಡದಲ್ಲಿ ಸಾಹುಕಾರ್ತಿಗೆ ಜಯ

ಬೆಳಗಾವಿ: ಹೆಬ್ಬಾಳ್ಕರ್ ವರ್ಸಸ್ ಜಾರಕಿಹೊಳಿ ಬಣದ ಹಗ್ಗ ಜಗ್ಗಾಟದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಣಕ್ಕೆ ಮೇಲುಗೈ ಆಗಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಕೊನೆಗೂ ಲಕ್ಷ್ಮಿ ಜಯದ ಮಾಲೆ ಧರಿಸಿದ್ದಾರೆ.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕ್ಷಣ ಕ್ಷಣಕ್ಕೂ ತೀವ್ರ ಕೂತುಹಲ ಕೆರಳಿಸಿದ್ದ ಕಲಹಕ್ಕೆ ಕ್ಲೈಮ್ಯಾಕ್ಸ್ ಮುಗಿದಿದೆ. ಆದ್ರೆ ಜಾರಕಿಹೊಳಿ ಬಣ ಬಾಬುರಾವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಾರದು ಎಂದು ಹೈಕಮಾಂಡ್ ಪಟ್ಟು ಹಿಡಿದಿದ್ದರಂತೆ.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹದೇವ್ ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಬಾಪುಸಾಹೇಬ್ ಜಾಮದಾರ್ ಅವಿರೋಧವಾಗಿ ಆಯ್ಕೆ ಆಗಿದ್ದರಿಂದ ಜಾರಕಿಹೊಳಿ ಬಣಕ್ಕೆ ತೀವ್ರ ಮುಖಭಂಗ ಉಂಟಾಗಿದೆ. ಗುರುವಾರದವರೆಗೂ ಭಿನ್ನ ಭಿನ್ನ ಹೇಳಿಕೆಯನ್ನು ನೀಡುತ್ತಿದ್ದ ಜಾರಕಿಹೊಳಿ ಬ್ರದರ್ಸ್ ಕೊನೆ ಕ್ಷಣದಲ್ಲಿ ತೀರ್ಮಾನ ಬದಲಾಯಿಸಿದ್ದು ಯಾಕೆ ಎಂಬುವುದು ಮಾತ್ರ ರಹಸ್ಯವಾಗಿ ಉಳಿದುಕೊಂಡಿದೆ.

ಪಿಎಲ್‍ಡಿ ಬ್ಯಾಂಕಿಗೆ ಬಂದ ಹೆಬ್ಬಾಳ್ಕರ್ ಬಣದ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಜಾರಕಿಹೊಳಿ ಬಣದಿಂದ ನಾಮಪತ್ರ ಸಲ್ಲಿಕೆ ಅಗದೇ ಇರೋದ್ರಿಂದ ಹೆಬ್ಬಾಳ್ಕರ್ ಬಣದ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮಪತ್ರ ಸಲ್ಲಿಸದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಹೀಗಾಗಿ ಯಾರೂ ನಾಮಪತ್ರ ಸಲ್ಲಿಸುತ್ತಿಲ್ಲ. ಹೀಗಾಗಿ ಇದೀಗ ಖಂಡ್ರೆ ಏನ್ ಹೇಳ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ. ಅದೇ ರೀತಿ ಲಕ್ಷ್ಮಿ ಬಣಕ್ಕೂ ದಿನೇಶ್ ಗುಂಡೂರಾವ್ ಇದೇ ಸಂದೇಶವನ್ನು ರವಾನಿಸಿರಬಹುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ