ಬೆಂಗಳೂರು: ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಕದನ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈಗಾಗಲೇ ಇಬ್ಬರ ಸಂಧಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆರನ್ನು ಸಂಧಾನ ನಡೆಸಲು ಕಳುಹಿಸಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಸತೀಶ್ ಜಾರಕಿಹೊಳಿ ಇಬ್ಬರನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಈಶ್ವರ್ ಖಂಡ್ರೆ ಸಂಧಾನಕ್ಕಾಗಿ ಮೂರು ಸೂತ್ರಗಳನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
ಸಂಧಾನ ಸೂತ್ರ ನಂ. 1
* ಉಭಯ ಬಣಗಳಿಗೂ ಅಧಿಕಾರ ಹಂಚಿಕೆ
* ಎರಡೂವರೆ ವರ್ಷ ಸತೀಶ್ ಜಾರಕಿಹೊಳಿ ಬಣಕ್ಕೆ ಅಧಿಕಾರ
* ಉಳಿದ ಎರಡೂವರೆ ವರ್ಷ ಹೆಬ್ಬಾಳ್ಕರ್ ಬಣಕ್ಕೆ ಅಧಿಕಾರ
* ಮೊದಲು ಸತೀಶ್ ಜಾರಕಿಹೊಳಿ ಬಣಕ್ಕೆ ಅಧಿಕಾರ ಬಿಟ್ಟು ಕೊಡಿ
* ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಕೆಪಿಸಿಸಿ ಮನವಿ
ಸಂಧಾನ ಸೂತ್ರ ನಂ. 2
* ಹೆಬ್ಬಾಳ್ಕರ್, ಜಾರಕಿಹೊಳಿ ಬಣಗಳ ಕಿತ್ತಾಟಕ್ಕೆ ಕಾರಣರಾದವರನ್ನ ಅಧಿಕಾರದಿಂದ ದೂರ ಇಡುವುದು
* ಹೆಬ್ಬಾಳ್ಕರ್ ಬಣದ ಬಾಪುಗೌಡ, ಮಹಾಂತೇಶ್ಗೆ ಅಧಿಕಾರ ಸಿಗದಂತೆ ನೋಡಿಕೊಳ್ಳುವುದು
* ಹೆಬ್ಬಾಳ್ಕರ್ ಬಣಕ್ಕೆ ಇವರಿಬ್ಬರಿಗೆ ಅಧಿಕಾರ ನೀಡದೇ ಬೇರೆಯವರಿಗೆ ನೀಡುವುದು
* ಈ ಮೂಲಕ ಜಾರಕಿಹೊಳಿ ಬ್ರದರ್ಸ್ ಕೋಪ ಶಮನಕ್ಕೆ ಯತ್ನ ಮಾಡುವುದು
ಸಂಧಾನ ಸೂತ್ರ ನಂ. 3
* ಎರಡೂ ಬಣಗಳಿಗೆ ಸಮ ಮತ ಬೀಳುವಂತೆ ನೋಡಿಕೊಳ್ಳುವುದು
* ಹೆಬ್ಬಾಳ್ಕರ್ ಬಣದ ಇಬ್ಬರು, ಜಾರಕಿಹೊಳಿ ಬಣಕ್ಕೆ ಮತ ಹಾಕುವುದು
* ಸಮ ಮತ ಬಿದ್ದು ಚೀಟಿ ಎತ್ತುವ ಮೂಲಕ ಅಧಿಕಾರ ಹಂಚಿಕೆ
* ಅದೃಷ್ಟ ಯಾರಿಗಿದೆಯೋ ಅವರಿಗೆ ಅಧಿಕಾರ ಎನ್ನುವುದು
* ಈ ಮೂಲಕ ಎರಡೂ ಬಣಗಳ ಪ್ರತಿಷ್ಠೆ ಕುಗ್ಗದಂತೆ ನೋಡಿಕೊಳ್ಳುವುದು
ಜಾರಕಿಹೊಳಿ ಬ್ರದರ್ಸ್ ಅಸಮಾಧಾನ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದ್ದು, ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಯೋಚಿಸಲಾಗುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಒಂದು ವೇಳೆ ಪಿಎಲ್ಡಿ ಬ್ಯಾಂಕ್ ಚುನಾವಣೆ ಹತೋಟಿಗೆ ಸಿಗದೇ ಇದ್ದಲ್ಲಿ, ಸೆಪ್ಟೆಂಬರ್ ಮೂರನೇ ವಾರದಲ್ಲಿ ಸಚಿವ ಸ್ಥಾನ ಸಿಗುವಂತೆ ಕಾಂಗ್ರೆಸ್ ನೋಡಿಕೊಳ್ಳಲು ಚಿಂತಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಯುರೋಪ್ ಪ್ರವಾಸದಿಂದ ಹಿಂದಿರುಗಿದ ಬಳಿಕ ಈ ಕುರಿತು ಕಾಂಗ್ರೆಸ್ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಕೊಲ್ಲಾಪುರದ ಲಕ್ಷ್ಮಿಪುರದಮ್ಮನ ಮೇಲೆ ಆಣೆ ಮಾಡಿರೋ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ರನ್ನು ಹದ್ದು ಬಸ್ತಿನಲ್ಲಿ ಇಡದಿದ್ರೆ ಉಗ್ರ ನಿರ್ಣಯ ಕೈಗೊಳ್ಳುವುದಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ಗೆ ರಾಜಕೀಯದ ದಾರಿ ತೋರಿಸಿ ಕೊಟ್ಟಿದ್ದೇ ನಾವು. ಹೇಳೋರ ಮಾತು ಕೇಳಿ ಆಕೆ ದಾರಿ ತಪ್ಪಿದ್ದಾರೆ ಅಂತ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.