ಮೈಸೂರು:ಕರ್ನಾಟಕ ಪ್ರೀಮಿಯರ್ ಲೀಗ್ನ 7ನೇ ಆವೃತ್ತಿಯಲ್ಲಿ ಬಿಜಾಪುರ ಬುಲ್ಸ್ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಇದರೊಂದಿಗೆ ಕೆಪಿಎಲ್ನಲ್ಲಿ ಎರಡನೇ ಬಾರಿಗೆ ಚಾಂಪಿಯನ್ಪಟ್ಟ ಅಲಂಕರಿಸಿದೆ.
ಮೈಸೂರಿನಲ್ಲಿ ನಡೆದ ಕೆಪಿಎಲ್ ಲೀಗ್ನ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಬಿಜಾಪುರ ಬುಲ್ಸ್ 7 ವಿಕೆಟ್ಗಳಿಂದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 101 ರನ್ಗಳಿಗೆ ಆಲೌಟ್ ಆಯಿತು. ಸ್ಪಿನ್ನರ್ ಕೆ.ಪಿ.ಅಪ್ಪಣ್ಣ 3,ನವೀನ್ ಮತ್ತು ಭವೇಶ್ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು.
102 ಟಾರ್ಗೆಟ್ ಬೆನ್ನತ್ತಿದ ಬಿಜಾಪುರ ಬುಲ್ಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ ನವೀನ್ ಎಂ.ಜಿ 43, ಭರತ್ ಚಿಪ್ಲಿ 19, ಕೌನಾನ್ ಅಬ್ಬಾಸ್ 15 ರನ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಕೊನೆಗೆ ಬಿಜಾಪುರ ಬುಲ್ಸ್ 13.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 106 ರನ್ಗಳಿಸಿ ಈ ಸೀಸನ್ನ ಚಾಂಪಿಯನ್ನಾಗಿ ಹೊರಹೊಮ್ಮಿತ್ತು.