ಬೆಂಗಳೂರು: ಇಸ್ರೇಲ್ನಲ್ಲಿ ಭಾರತದ ಧ್ವಜಕ್ಕೆ ಅವಮಾನ ಮಾಡಿದ ಘಟನೆ ನಡೆದಿದ್ದು, ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅವರು ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕಾಗಿ ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಿರತರಾಗಿದ್ದ ವೇಳೆ ರಾಷ್ಟ್ರಧ್ವಜ ತಲೆ ಕೆಳಗಾಗಿ ಹಾರಾಡುತ್ತಿತ್ತು.
ಕರ್ನಾಟಕದ ಅಧಿಕಾರಿಗಳು ಮತ್ತು ಸಚಿವರು ಧ್ವಜವನ್ನು ಸರಿಮಾಡಬಹುದಿತ್ತಲ್ಲಾ, ಇಲ್ಲವಾದಲ್ಲಿ ಸರಿ ಮಾಡಲು ಹೇಳಬಹುದಿತ್ತಲ್ಲಾ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.