ಅಮೆರಿಕಾದಲ್ಲಿ ಗುಂಡಿನ ದಾಳಿ: ಭಾರತೀಯ ಸೇರಿ ಮೂವರು ಬಲಿ

ಚಿಂಚಿನಾಟಿ: ಅಮೆರಿಕಾದ ಫೌಂಟೇನ್ ಸ್ಕ್ವೇರ್ ಕಟ್ಟಡ ಸಮೀಪದ ಖಾಸಗಿ ಬ್ಯಾಂಕೊಂದರ ಪ್ರಧಾನ ಕಚೇರಿ ಆವರಣದಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಯುವಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮೃತಪಟ್ಟ ಯುವಕನನ್ನು ಆಂಧ್ರಪ್ರದೇಶದ ಪೃಥ್ವಿರಾಜ್ ಕಂಡೆಪಿ ಎಂದು ಗುರುತಿಸಲಾಗಿದೆ ಎಂದು ಅಮೆರಿದಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿವೆ.

ಶುಕ್ರವಾರ ಬೆಳಗ್ಗೆ 9.10ರ ಸುಮಾರಿಗೆ ಅಪರಿಚಿತ ಯುವಕನೊಬ್ಬ ಬಂದೂಕು ಹಿಡಿದು ಬ್ಯಾಂಕ್‌ ಆವರಣಕ್ಕೆ ನುಗ್ಗಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮೂವರು ಗುಂಡಿಗೆ ಬಲಿಯಾಗಿದ್ದು ಐದು ಜನರು ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ದುಷ್ಕರ್ಮಿಯನ್ನು ಹತ್ಯೆ ಮಾಡಿದ್ದಾರೆ. ಈತ ಘಟನೆ ನಡೆದಿರುವ ಬ್ಯಾಂಕಿನ ಉದ್ಯೋಗಿ ಅಲ್ಲ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ದುಷ್ಕರ್ಮಿಯ ಬಳಿ ಇದ್ದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ