ಬೆಂಗಳೂರು, ಸೆ.6- ಬೇಗೂರು ಪೆÇಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಬ್ಲ್ಯಾಕ್ಮೇಲ್ ದೂರು ಸತ್ಯಕ್ಕೆ ದೂರವಾದದ್ದು ಎಂದು ಚಿತ್ರನಟ ಧರ್ಮೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸರಿಸುಮಾರು 20 ವರ್ಷಗಳಿಂದ 25್ಕ0 ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇಲ್ಲಿಯವರೆಗೂ ಯಾವುದೇ ರೀತಿಯಲ್ಲೂ ಒಂದು ಕಪ್ಪು ಚುಕ್ಕಿಯನ್ನೂ ಸಹ ಹೊಂದಿಲ್ಲ ಎಂದರು.
ನನ್ನ ಜೊತೆ ಇಲ್ಲಿಯವರೆಗೂ ಎಷ್ಟೋ ನಟಿಯರು ನಟಿಸಿದ್ದಾರೆ. ಆದರೆ ಅವರೊಂದಿಗೆ ನಾನು ಅಸಭ್ಯವಾಗಿ ವರ್ತಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್-ಟ್ವಿಟರ್ಗಳ ಬಳಕೆಯಾಗುತ್ತಿದ್ದು, ಅದರಲ್ಲಿ ಎಷ್ಟೋ ಹೆಣ್ಣು ಮಕ್ಕಳು ನನಗೆ ಸಿನಿಮಾರಂಗದಲ್ಲಿ ಅವಕಾಶ ಕೊಡಿಸುವಂತೆ ಕೇಳಿದ್ದಾರೆ. ಆದರೆ ನಾನು ಅವರಿಗೆಲ್ಲಾ ಹೇಳಿದ್ದು ಒಂದೆ. ಹಲವಾರು ಚಾನೆಲ್ಗಳಿವೆ. ಅದರಲ್ಲಿ ರಿಯಾಲಿಟಿ ಶೋಗಳಲ್ಲಿ ನೀವು ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಿ ಎಂದು ಸಲಹೆ ನೀಡಿದ್ದೇನೆ ಹೊರತು ಯಾರೊಂದಿಗೂ ಅಸಭ್ಯ ವರ್ತನೆ ಮಾಡಿಲ್ಲ ಎಂದರು.
ಕಳೆದ ಎರಡು ತಿಂಗಳ ಹಿಂದೆ ಸುಳ್ಳು ದೂರು ದಾಖಲಿಸಿರುವ ವಿಚಾರವಾಗಿ ನನ್ನ ಮೇಲೆ ಎಫ್ಐಆರ್ ದಾಖಲಾಗಿತ್ತು. ಆದ್ದರಿಂದ ಕೋರ್ಟ್ನಲ್ಲಿ ಜಾಮೀನು ಸಿಗುವವರೆಗೂ ಅಜ್ಞಾತ ಸ್ಥಳದಲ್ಲಿರಬೇಕಾದ ಅನಿವಾರ್ಯತೆಯಿದ್ದು, ಅಂಥ ಸಂದರ್ಭದಲ್ಲಿ ಕೆಲವರು ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ಸಂಗ್ರಹಿಸಿ ನನ್ನ ವಿರುದ್ದ ಪ್ರಸಾರ ಮಾಡಿದ್ದಾರೆ. ಆದರೆ ಇದರಿಂದ ನನ್ನ ಮನಸ್ಸಿಗೆ ತುಂಬ ದುಃಖವಾಗಿದೆ. ನನ್ನ ಬಗ್ಗೆ ದಯಾಮಾಡಿ ತಪ್ಪು ತಪ್ಪಾಗಿ ಮಾಹಿತಿ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.