ಮಾದಕ ಮಾತ್ರೆಗಳ ಮಾರಾಟ: ವ್ಯಕ್ತಿ ಬಂಧನ

ಬೆಂಗಳೂರು, ಸೆ.6- ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಕೋಲ್ಕತ್ತಾ ಮೂಲದಿಂದ ಬಂದಿದ್ದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 3.20 ಲಕ್ಷ ಮೌಲ್ಯದ ಯಾಬಾ ಹೆಸರಿನ ಮಾತ್ರೆಯನ್ನು ವಶಪಡಿಸಿಕೊಂಡಿದ್ದಾರೆ.
ತೈಲ್ಯಾಂಡ್, ಮ್ಯಾನ್ಮಾರ್, ಬಾಂಗ್ಲಾದೇಶ ಮೂಲದ ಮೆಥಅಂಫಟಮೈನ್ (ಯಾಬಾ) ಮಾದಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಹಮ್ಮದ್ ಅಬ್ದುಲ್ ರೆಹಮಾನ್ (25) ಬಂಧಿತ ಆರೋಪಿಯಾಗಿದ್ದು, ಈತನಿಂದ 3.20 ಲಕ್ಷ ಮೌಲ್ಯದ 335 ಮಾದಕ ಮಾತ್ರೆಗಳು, 20 ಜಿಫ್‍ಲಾಕ್ ಕವರ್‍ಗಳು, ಮೊಬೈಲ್, 500ರೂ. ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಈ ಮಾತ್ರೆಗಳನ್ನು ಸಹಚರರೊಂದಿಗೆ ಸೇರಿಕೊಂಡು ಹೊರ ದೇಶದಿಂದ ತನ್ನ ವ್ಯವಸ್ಥಿತ ಜಾಲದ ಮೂಲಕ ತರಿಸಿಕೊಂಡು ಪ್ರತೀ ಮಾತ್ರೆಗೆ 600ರೂ.ನಿಂದ 900ರೂ.ಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದನು.
ಬೇಗೂರು ವ್ಯಾಪ್ತಿಯ ವಿಶ್ವಪ್ರಿಯಾ ನಗರದ ಸ್ವರಭ ರಸ್ತೆಯ 18ನೇ ಕ್ರಾಸ್‍ನಲ್ಲಿ ಈತ ಮಾದಕ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದಾಗ ಪೆÇಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಯುವಕ, ಯುವತಿಯರಿಗೆ ಈ ಮಾತ್ರೆಗಳನ್ನು ಮಾರಾಟ ಮಾಡಿ ಮಾದಕ ವ್ಯಸನಿಗಳಾಗಿ ಮಾಡಿ ಹಣ ಸಂಪಾದನೆ ಮಾಡುತ್ತಿದದ್ದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದ್ದು, ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ