ರಾಜ್ಯದಲ್ಲಿ‌ ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚಲಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ತುಮಕೂರು: ರಾಜ್ಯದಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ಶೇ. ೨೦ ರಷ್ಟು ಏರಿಕೆ ಮಾಡುವ ಚಿಂತನೆ ಸರಕಾರದ ಮಟ್ಟದಲ್ಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ 120 ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇತ್ತೀಚಿನ‌ ದಿನಗಳಲ್ಲಿ ಮಹಿಳೆಯರು ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳುವ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದಲ್ಲಿರುವ 250 ಐಪಿಎಸ್‌ ಅಧಿಕಾಗಳ ಪೈಕಿ 20 ಮಹಿಳಾ ಅಧಿಕಾರಿಗಳಿದ್ದಾರೆ. ಒಟ್ಟಾರೆ ಶೆ. ೬ ರಷ್ಟು‌ ಮಹಿಳೆ ಪೇದೆಗಳು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಂಖ್ಯೆಯನ್ನು ಶೆ.೨೦ ಕ್ಕೆ ಏರಿಸಬೇಕೆಂಬ ಚಿಂತನೆ‌ ಇದೆ ಎಂದರು.

ಇಂದು ವಿವಿಧ ಪದವಿ ಪಡೆದವರು ಪೊಲೀಸ್ ಇಲಾಖೆಯನ್ನೇ ಆಯ್ದುಕೊಳ್ಳುತ್ತಿರುವುದು ಸ್ವಾಗತಾರ್ಹ. ಪದವೀಧರರು, ಸ್ನಾತಕೋತ್ತರ ಪದವಿ ಪಡೆದವರು ಸಹ ನಮ್ಮ ಇಲಾಖೆಗೆ ಸೇರಲು ಆಸಕ್ತಿ ತೋರುತಿದ್ದಾರೆ. ಈಗ ತರಬೇತಿ ಪಡೆದಿರುವ ೧೨೧ ಮಹಿಳಾ ಪ್ರಶಿ್ಷಣಾರ್ಥಿಗಳ ಪೈಕಿ 16 ಜನ‌ಸ್ನಾತಕೋತ್ತರ,96 ಪದವೀಧರರಿದ್ದಾರೆ ಎಂದರು.

ಪೊಲೀಸ್ ಸಿಬ್ಬಂದಿಗೆ ವಸತಿ ಸಮ್ಮುಚ್ಛ ನಿರ್ಮಿಸಿಕೊಡುವ ಕೆಲಸ ಪ್ರಗತಿಯಲ್ಲಿದೆ. ವಿವಿಧ ತಾಲೂಕುಗಳಿಗೆ ಒಟ್ಟು ೨೫೦ ಹೆಚ್ಚು ವಸತಿ ಗೃಹ ನಿರ್ಮಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಇದೀಗ ತರಬೇತಿ ಪಡೆದಿರುವ‌ ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಉತ್ತಮ‌ ಕೆಲಸ ನಿರ್ವಹಿಸಿ‌ ಎಂದು ಶುಭಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ