
ಬೆಂಗಳೂರು: ಕೊಡಗು ಮೂಲದ ಕನ್ನಡ ನಟಿ, “ಕಿರಿಕ್ ಪಾರ್ಟಿ” ಖ್ಯಾತಿಯ ರಶ್ಮಿಕಾ ಮಂಣ್ಣ ಇದೀಗ 100 ಕೋಟಿ ಕ್ಲಬ್ ಗೆ ಸೇರಿದ್ದಾರೆ. ಇವರ ಅಭಿನಯದ ಎರಡನೇ ತೆಲುಗು ಚಿತ್ರ “ಗೀತ ಗೋವಿಂದಂ” ನೂರು ಕೋಟಿ ಕ್ಲಬ್ ಗೆ ಸೇರ್ಪಡೆಯಾಗಿದೆ.
ಪರಾಸುರಂ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕರಾಗಿ ಕಾಣಿಸಿಕೊಂಡಿದರು.”ಕಳೆದ ಏಳು ತಿಂಗಳುಗಳಲ್ಲಿ ನಾನು ಮಾಡಿದ್ದ ಪ್ರಯತ್ನಕ್ಕೆ ಫಲ ಸಿಕ್ಕಿದೆ.ನಾನು ಎಂದಿಗೂ ಹಣದ ಹಿಂದೆ ಹೋಗುವ ವ್ಯಕ್ತಿಯಲ್ಲ. ಕೇವಲ ಸಿನಿಮಾ ಮೇಲಿನ ಪ್ರೀತಿಯಿಂದಷ್ಟೇ ಕೆಲಸ ಮಾಡುತ್ತೇನೆ. ಆದ್ದರಿಂದ, `100 ಕೋಟಿ ಕ್ಲಬ್ ಗೆ ಸೇರುವದು ನನ್ನ ಗುರಿಯಲ್ಲ, ನಾನಿನ್ನೂ ಅಭಿನಯದಲ್ಲಿ ಪಳಗಬೇಕು. ಇದೀಗ ನನ್ನನ್ನು ನನ್ನ ಅಭಿನಯವನ್ನು ಗುರುತಿಸಲಾಗಿದ್ದು ಮೆಚ್ಚಿಕೊಳ್ಳಲಾಗುತ್ತಿದೆ.ಇದು ನನಗೆ ಸಂತಸ ತಂದಿದೆ” ರಶ್ಮಿಕಾ ಹೇಳುತ್ತಾರೆ.
ರಶ್ಮಿಕಾ ಬ್ರ್ಯಾಂಡ್ ಮೌಲ್ಯ ಒಂದೇ ರಾತ್ರಿಯಲ್ಲಿ ಏರಿಕೆಯಾಗಿದೆ, ಇವರ ಸಂಬಾವನೆ ಕುರಿತಂತೆಯೂ ಸಾಕಷ್ಟು ಊಹಾಪೋಹಗಳು ಹುಟ್ಟಿದೆ ಎನ್ನುವ ಮಾತಿಗೆ “ನಿಮ್ಮ ಚಿತ್ರವು ಯಶಸ್ವಿಯಾದಾಗ, ನಿಮ್ಮ ಸಂಭಾವನೆ ಕೂಡಾ ಹೆಚ್ಚಾಗುತ್ತದೆ. ಚಿತ್ರನಿರ್ಮಾಪಕರು ತಾವು ಪಾವತಿಸಬೇಕಾದ ‘ಬೆಲೆ’ಗೆ ನಾವು ಯೋಗ್ಯರಾದರೆ ಮಾತ್ರ ಹೆಚ್ಚಿನ ಹಣ ಪಾವತಿಸುತ್ತಾರೆ.ಇದೆಲ್ಲ ದೊಡ್ಡ ಮಾತು, ನಾನು ಒಳ್ಳೆಯ ಚಿತ್ರಗಳಲ್ಲಿ ನಟಿಸುವುದಕ್ಕಷ್ಟೇ ಉದ್ಯಮದಲ್ಲಿದ್ದೇನೆ.” ಅವರು ಹೇಳಿದ್ದಾರೆ.
ರಶ್ಮಿಕಾ ಸಧ್ಯ ತೆಲುಗಿನಲ್ಲಿ ತಮ್ಮ ಮೂರನೇ ಚಿತ್ರ “ದೇವದಾಸ್” ನಲ್ಲಿನ ತಮ್ಮ ಶೆಡ್ಯೂಲ್ ಪೂರ್ತಿಗೊಳಿಸುವತ್ತ ಚಿತ್ತ ನೆಟ್ಟಿದ್ದಾರೆ.ಇದು ಸಹ ವಿಜಯ್ ದೇವರಕೊಂಡ ಅಬೀನಯದ ಚಿತ್ರವೇ ಆಗಿದ್ದು . “ನಾನು ದೇವದಾಸ್ ಪರಿಕಲ್ಪನೆಯನ್ನು ಇಷ್ಟಪಟ್ಟೆ, ಮತ್ತು ಅದಕ್ಕಾಗಿಯೇ ನಾನು ನಟಿಸಲು ಒಪ್ಪಿದೆ.” ನಟಿ ಹೇಳಿದರು.
ಅದಲ್ಲದೆ, ಅವರು ಕನ್ನಡ ಚಿತ್ರ, “ಯಜಮಾನ” ಚಿತ್ರದ ಚಿತ್ರೀಕರಣದಲ್ಲಿ ಸಹ ಪಾಲ್ಗೊಳ್ಳುತ್ತಿದಾರೆ .”ಚಿತ್ರದಲ್ಲಿ ಒಂದೆರಡು ಹಾಡಿನ ಚಿತ್ರೀಕರಣ ಬಾಕಿ ಇದೆ, ಈ ನಡುವೆ ನಾನು ಕೆಲವು ಸ್ಕ್ರಿಪ್ಟ್ ಗಳನ್ನು ಓದುತ್ತಿದ್ದೇನೆ. ಮತ್ತು ಇದರಲ್ಲಿ ಅತ್ಯುತ್ತಮವಾದದ್ದನ್ನು ಆಯ್ದುಕೊಳ್ಳಲು ಬಯಸುತ್ತೇನೆ” ರಶ್ಮಿಕಾತಿಳಿಸಿದರು.
ರಶ್ಮಿಕಾಗೆ ಕಾಲಿವುಡ್ ಹಾಗೂ ಬಾಲಿವುಡ್ ಗಳಲ್ಲಿ ಸಹ ಹಲವು ಆಫರ್ ಗಳು ಬರುತ್ತಿದೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ.”ಕಾಲಿವುಡ್ ನಿಂದನನಗೆ ಹಲವು ಆಫರ್ ಗಳು ಬಂದಿದ್ದು ನಿಜ, ತಮಿಳಿನಲ್ಲಿ ಇದು ನನ್ನ ಮೊದಲ ಅಭಿನಯವಾಗಿರುವ ಕಾರಣ ನಾನು ಸರಿಯಾದ ಕಥೆಗಾಗಿ ಕಾಯುತ್ತಿದ್ದೇನೆ. ಇನ್ನು ಬಾಲಿವುಡ್ ನಲ್ಲಿ ಸಹ ಇದೇ ರೀತಿಯದಾಗಿದೆ, ಅಲ್ಲಿಂದಲೂ ಆಫರ್ ಗಳು ಬರುತ್ತಿದೆ, ಸರಿಯಾದ ಸ್ಕ್ರಿಪ್ಟ್ ಗಾಗಿ ಕಾಯುತ್ತೇನೆ” ಎಂದರು.