ಬೆಂಗಳೂರು, ಸೆ.5- ಮಸೀದಿಯೊಂದರ ಬಳಿ ನಿಂತಿದ್ದ ಮೆಡಿಕಲ್ ಸ್ಟೋರ್ ನೌಕರನಿಗೆ ಚಾಕು ತೋರಿಸಿ ಬೆದರಿಸಿದ ದರೋಡೆಕೋರ 15 ಸಾವಿರ ರೂ. ಹಣ ಕಸಿದು ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಸಂಜೆ 4 ಗಂಟೆ ಸಮಯದಲ್ಲಿ ಮೈಸೂರು ರಸ್ತೆಯ ಮಸೀದಿಯೊಂದರ ಬಳಿ ರಾಜೇಶ್ ಎಂಬುವವರು ನಿಂತಿದ್ದರು.
ಈ ಸಂದರ್ಭದಲ್ಲಿ ಬೈಕ್‍ನಲ್ಲಿ ಇವರ ಬಳಿ ಬಂದ ದರೋಡೆಕೋರ ಚಾಕು ತೋರಿಸಿ ಬೆದರಿಸಿ ಹಣ ಕಸಿದು ಪರಾರಿಯಾಗಿದ್ದಾನೆ.
ರಾಜೇಶ್ ಅವರು ಸಹಾಯಕ್ಕಾಗಿ ಕೂಗಿಕೊಂಡರಾದರೂ ಅಷ್ಟೊತ್ತಿಗಾಗಲೇ ದರೋಡೆಕೋರ ಕಣ್ಮರೆಯಾಗಿದ್ದನು.
ಈ ಬಗ್ಗೆ ಚಾಮರಾಜಪೇಟೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.