ಹಿಂದ್ ಅಥವಾ ಹಿಂದುಸ್ಥಾನ್ ಎಂಬ ಪದಕ್ಕೆ ಅಗೌರವ

Varta Mitra News

ಬೆಂಗಳೂರು, ಸೆ.5- ವಿದೇಶಿ ಕಂಪೆನಿಯಾದ ಹಿಂದೂಸ್ತಾನ್ ಸ್ಯಾನಿಟರಿವೇರ್ ಮತ್ತು ಇಂಡಸ್ಟ್ರೀಸ್ ಲಿ.ನವರು ಹಿಂದ್ ಅಥವಾ ಹಿಂದುಸ್ಥಾನ್ ಎಂಬ ಪದವನ್ನು ಶೌಚಾಲಯಗಳಿಗೆ ಬಳಸುವಂತಹ ಬೇಸನ್ ಮತ್ತು ಕಮೋಡ್‍ಗಳಲ್ಲಿ ಮುದ್ರಿಸಿ ನಮ್ಮ ರಾಷ್ಟ್ರವನ್ನು ಅವಮಾನಿಸಿದ್ದಾರೆ ಎಂದು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಮಹೇಶ್‍ಗೌಡ ಮಾತನಾಡಿ, ಬೇರೆ ಯಾವ ಉತ್ತಮ ಉತ್ಪನ್ನಗಳಲ್ಲೂ ಹಿಂದ್ ಪದವನ್ನು ಬಳಸದೆ ಕೇವಲ ಶೌಚಾಲಯ ಉತ್ಪನ್ನಗಳಾದ ಕಮೋಡ್‍ಗಳು ಹಾಗೂ ಪಾಟ್‍ಗಳ ಮೇಲೆ ಮುದ್ರಿಸಿ ನಮ್ಮ ದೇಶದ ಹೆಸರಿಗೆ ಕಪ್ಪು ಚುಕ್ಕೆ ಮೂಡಿಸಲಾಗಿದೆ. ಈ ಮೂಲಕ ಭಾರತವನ್ನು ಅವಮಾನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಬಿಡದೆ ತಡೆಹಿಡಿದು ಕಂಪನಿಯ ಒಪ್ಪಂದವನ್ನು ರದ್ದುಮಾಡಿ ನಮ್ಮ ಭಾರತ ರಾಷ್ಟ್ರದ ಹೆಸರನ್ನು ಉಳಿಸಿ-ಬೆಳೆಸಿ ಮುಂದೆ ಇಂತಹ ಘೋರ ಕೃತ್ಯವನ್ನು ಎಸಗದಂತೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಹೇಶ್‍ಗೌಡ ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ