ಕರ್ಲಾನ್ ತನ್ನ ಮುಂದಿನ ಎರಡು ವರ್ಷಗಳಲ್ಲಿ ತನ್ನ ಉತ್ಪನ್ನ ಮತ್ತು ಯೋಜನೆಗಳಿಗೆ ಹೊಸ ತಂತ್ರಜ್ಞಾನಕ್ಕಾಗಿ 200 ಕೋಟಿ ಹೂಡಿಕೆ
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಇಂದಿನ ವೇಗದ ಜೀವನಶೈಲಿಗಳಿಗೆ ಅಗತ್ಯಕ್ಕೆ ತಕ್ಕಂತಹ ‘STR 8’ ತಂತ್ರಜ್ಞಾನ ದ ಮ್ಯಾಟ್ರೆಸ್ ಪರಿಚಯ
ಬೆಂಗಳೂರು, ಸೆಪ್ಟೆಂಬರ್ 05, 2018: ಭಾರತದ ಮುಂಚೂಣಿ ಮತ್ತು ಅತಿದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಮ್ಯಾಟ್ರೆಸ್, ಗೃಹ ಪೀಠೋಪಕರಣ ಹಾಗು ಪರಿಕರ ಬ್ರ್ಯಾಂಡ್ ಆದ ಕರ್ಲಾನ್, ಇಂದಿನ ದಿನಗಳಲ್ಲಿ ಅವಸರದ ಜೀವನಶೈಲಿಗಳನ್ನು ನಡೆಸುತ್ತಿರುವ ಬಹುತೇಕ ಮಂದಿಗೆ ಅತ್ಯಗತ್ಯವಾದ, ಅತ್ಯಂತ ಮೃದುತ್ವದ ಅರಾಮದಾಯಕ ಮತ್ತು ಮಾಂಸ ಖಂಡಗಳಿಗೆ ಆರಾಮ ಕೊಡುವ ಮತ್ತು ಆಲ್ಹಾದದ ಸಮತೋಲನ ಒದಗಿಸುವಂತಹ ಭಾರತದಲ್ಲೇ ಮೊಟ್ಟಮೊದಲನೆಯ ಆವಿಷ್ಕಾರವಾದ ‘STR 8’ ತಂತ್ರಜ್ಞಾನದ ಪರಿಚಯವನ್ನು ಕರ್ಲಾನ್ ನಗರದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಪರಿಚಯಿಸಿದೆ.
ಆಧುನಿಕ ತಂತ್ರಜ್ಞಾನವುಳ್ಳ ಹಾಸಿಗೆಯನ್ನು 20-40% ಹಗುರವಾಗಿರುವುದಲ್ಲದೇ , ಬಳಸಲು ಮತ್ತು ನಿರ್ವಹಿಸಲು ಸಹ ಸುಲಭವಾಗಿದೆ. ಮೊದಲಿಗೆ ಕರ್ಲಾನ್ ನ ನಾರಿನ ಹಾಸಿಗೆ(ಕಾಯ್ರ್ ಮ್ಯಾಟ್ರೆಸ್) ಮೇಲೆ ಈ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪ್ರಸ್ತುತ ಫೋಮ್ ಹಾಗು ಸ್ಪ್ರಿಂಗ್ ಹಾಸಿಗೆಗಳಿಗೆ ವಿಸ್ತರಿಸಲಾಗಿದೆ. ಹಾಸಿಗೆಗಳ ವಿಷಯದಲ್ಲಿ ಗುಣಮಟ್ಟದೊಂದಿಗೆ ಹೊಂದಿಕೊಂಡಿರುವ ಕರ್ಲಾನ್ ಬ್ರ್ಯಾಂಡ್ ‘STR 8’ ತಂತ್ರಜ್ಞಾನ ಪರಿಚಯಿಸಿರುವುದರಿಂದ ಪ್ರಸಿದ್ಧತೆಗೆ ಮತ್ತೊಮ್ಮೆ ಗ್ರಾಹಕ ಸ್ನೇಹಿ ಎಂಬುದನ್ನು ಖಾತ್ರಿಗೊಳಿಸಿದೆ.
ಹೊಸ ತಂತ್ರಜ್ಞಾನದ ಪರಿಚಯ ಮತ್ತು ಸಂಸ್ಥೆಯ ಬೆಳವಣಿಗೆಯ ಯೋಜನೆಗಳನ್ನು ಘೋಷಿಸುವುದಕ್ಕೆ ಇಂದು ನಗರದಲ್ಲಿ ಏರ್ಪಡಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಕರ್ಲಾನ್ ನವ ಪೀಳಿಗೆ ಗ್ರಾಹಕರಿಗಾಗಿಯೇ ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸುವಂತಹ ಉತ್ಪನ್ನಗಳ ತನ್ನ ಶ್ರೇಣಿಗಳಿಗೆ ವಿಸ್ತರಿಸಲು ಆವಿಷ್ಕಾರ ಹಾಗು ಹೊಸ ತಂತ್ರಜ್ಞಾನದ ಕೇಂದ್ರೀಕರಣವನ್ನು ಹೆಚ್ಚಿಸಿರುವುದಾಗಿ ಘೋಷಿಸಿದೆ. “STR 8 “ ಮ್ಯಾಟ್ರೆಸ್‍ಅನ್ನು ಗಣನೀಯವಾಗಿ ಹಗುರಗೊಳಿಸುವುದು ಮಾತ್ರವಲ್ಲದೆ, ಅದನ್ನು ದೃಢವಾಗಿಯೂ ಪುಟಿದೇಳುವಂತೆಯೂ ಮಾಡುವ ಮೂಲಕ ನಿದ್ರೆಯ ಗುಣಮಟ್ಟ, ಬೆಳವಣಿಗೆಯನ್ನು ವರ್ಧಿಸುವುದರಿಂದ ಅದೊಂದು ಆವಿಷ್ಕಾರೀ ತಂತ್ರಜ್ಞಾನವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹಾಸಿಗೆ ಮತ್ತು ಗೃಹ ಪೀಠೋಪಕರಣ ವರ್ಗಗಳಾದ್ಯಂತ 125ಕ್ಕಿಂತ ಹೆಚ್ಚಿನ ವೈವಿಧ್ಯಮಯ ಹೊಸ ಉತ್ಪನ್ನಗಳು ಹಾಗು ಆವಿಷ್ಕಾರೀ ತಂತ್ರಜ್ಞಾನವನ್ನು ಪರಿಚಯಿಸಲು ಯೋಜಿಸಿರುವುದಾಗಿ ತಿಳಿಸಿದೆ. ಈ ವರ್ಷದ ಪ್ರಾರಂಭದಲ್ಲಿ ಕರ್ಲಾನ್, ಸೆಮಿ ಪ್ರೀಮಿಯಮ್ ಶ್ರೇಣಿಯ ಸೋಫಾಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
2020ರ ವೇಳೆಗೆ, ಬಹುಬ್ರ್ಯಾಂಡ್ ಮತ್ತು ಫ್ರಾಂಚೈಸೀ ಮಳಿಗೆಗಳು ಹಾಗು ತನ್ನ ವಿಶೇಷ ಬ್ರ್ಯಾಂಡ್ ಮಳಿಗೆಗಳಾದ “ಕರ್ಲಾನ್ ಹೋಮ್ಸ್” ಮತ್ತು ಇತ್ತೀಚಿಗೆ ಆರಂಭವಾದ “ಹೋಮ್ ಕಂಫರ್ಟ್” ಮಳಿಗೆಗಳ ಮೂಲಕ, ದೇಶಾದ್ಯಂತ ತನ್ನ ರೀಟೇಲ್ ಅಸ್ತಿತ್ವವನ್ನು 2000 ಮಳಿಗೆಗಳಿಗೆ ವಿಸ್ತರಿಸಲು ಯೋಜಿಸಿರುವ ಕರ್ಲಾನ್, ಕ್ರಮವಾಗಿ ಬೃಹತ್, ಮಧ್ಯದರ ಮಾರುಕಟ್ಟೆ ಹಾಗು ಹೈಎಂಡ್, ಪ್ರೀಮಿಯಮ್ ಮಾರುಕಟ್ಟೆಗಳ ಮೇಲೆ ಗುರಿಯಿರಿಸಿದೆ. ಸಂಸ್ಥೆಯು, ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ ಇರುವ 430 ಕರ್ಲ್_ಆನ್ ಹೋಮ್ ಸ್ಟೋರ್‍ಗಳನ್ನು 1000ಕ್ಕೆ ಮತ್ತು ಇನ್ನೂ 100 ಹೋಮ್ ಕಂಫರ್ಟ್ ಮಳಿಗೆಗಳನ್ನು ತೆರೆಯುವ ಗುರಿ ಹೊಂದಿದೆ.ಉತ್ಪನ್ನ ಪೋರ್ಟ್ ಪೋಲಿಯೋದಲ್ಲಿನ ಹೆಚ್ಚಳಿಕೆಯ ಜೊತೆಗೆ ಈ ರೀಟೇಲ್ ವಿಸ್ತರಣೆಯು ಮ್ಯಾಟ್ರೆಸ್ ಮಾರುಕಟ್ಟೆಯಲ್ಲಿ ಮುಂಚೂಣಿ ನಾಯಕನಾಗಿರುವ ಜೊತೆಗೆ, ಗಂಭೀರವಾದ ಮತ್ತು ಇನ್ನೂ ದೊಡ್ಡ ಗೃಹ ಪೀಠೋಪಕರಣ ಮತ್ತು ಪರಿಕರಗಳ ಬ್ರ್ಯಾಂಡ್ ಆಗಿ ಬೆಳೆದು ಉಗಮವಾಗುವುದಕ್ಕೆ ಕರ್ಲಾನ್ ಗೆ ಅವಕಾಶ ಒದಗಿಸುತ್ತದೆ.
ಔಪಚಾರಿಕವಾಗಿ ‘STR 8’ ತಂತ್ರಜ್ಞಾನ ಅನಾವರಣಗೊಳಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡುತ್ತಾ, ಕರ್ಲಾನ್ ನ ಅಧ್ಯಕ್ಷ ಹಾಗೂ ನಿರ್ವಾಹಕ ನಿರ್ದೇಶಕರಾದ ಶ್ರೀ ಸುಧಾಕರ ಪೈ ಅವರು “ಕಳೆದ ವರ್ಷ ನಮ್ಮ ಮಾರಾಟ 1050 ಕೋಟಿ ಆಗಿತ್ತು ಮತ್ತು ಉದ್ಯಮ ಬೆಳವಣಿಗೆಯ ಎರಡರಷ್ಟು ಪ್ರಮಾಣದಲ್ಲಿ ಬೆಳೆಯುವ ಗುರಿಯನ್ನು ನಾವು ಇರಿಸಿಕೊಂಡಿದ್ದೇವೆ. ಎರಡು ವರ್ಷಗಳ ಕೆಳಗೆ ನಾವು ಆರಂಭಿಸಿದ “ಕರ್ಲೋಪೀಡಿಕ್ ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಅಪಾರ ಯಶಸ್ಸು ಕಂಡಿದ್ದು, ಕಳೆದ ಎರಡು ವರ್ಷದಲ್ಲಿ ಆ ಉತ್ಪನ್ನದ ಮಾರಾಟವು 1.7 ಪಟ್ಟು ಬೆಳೆದಿದೆ. ಮ್ಯಾಟ್ರೆಸ್ ಗಳೊಂದಿಗೆ ಹೆಸರುವಾಸಿಯಾದ ಬ್ರ್ಯಾಂಡ್ ಆಗಿ ಈಗ ನಾವು ನಿಧಾನವಾಗಿ ಮನೆಯಲ್ಲಿ ಇನ್ನೂ ಹೆಚ್ಚಿನ ಆರಾಮವನ್ನು ಒದಗಿಸುವಂತಹ ವೈವಿಧ್ಯಮಯ ಉತ್ಪನ್ನ ಶ್ರೇಣಿಗಳನ್ನು ಒದಗಿಸುವ ಬ್ರ್ಯಾಂಡ್ ಆಗಿ ಉಗಮವಾಗುತ್ತಿದ್ದೇವೆ. ದೇಶಾದ್ಯಂತ ಇರುವ ನಮ್ಮ ಗ್ರಾಹಕರು ತಮ್ಮ ಮನೆಗಳಿಗಾಗಿ ಉತ್ತಮ ಗುಣಮಟ್ಟದ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದಕ್ಕೆ ಮತ್ತು ಮನೆಯಲ್ಲಿ ಇನ್ನೂ ಉತ್ತಮ ಆರಾಮದಲ್ಲಿ ಹೂಡಿಕೆ ಮಾಡುವುದಕ್ಕಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ನಮಗೆ ಅವಕಾಶ ಸಿಗುತ್ತದೆ. ಪ್ರಸ್ತುತ ನಮ್ಮ ಬಳಿ 18 ಉತ್ಪನ್ನ ವರ್ಗಗಳು ಮತ್ತು SಏUಗಳು ಇವೆ.ಭಾರತದಾದ್ಯಂತ ಇರುವ 2000 ದಷ್ಟು ಪ್ರಬಲವಾದ ಬ್ರ್ಯಾಂಡ್ ಫ್ರಾಂಚೈಸ್ ಜಾಲಸಂಪರ್ಕದ ಜೊತೆಗೆ, ಈ ಎಲ್ಲಾ ಉತ್ಪನ್ನಗಳು ವಿಶೇಷ ಬ್ರ್ಯಾಂಡ್ ಮಳಿಗೆಯಲ್ಲೂ ಲಭ್ಯವಿರುತ್ತವೆ. ವಿವಿಧ ಪ್ರದೇಶಗಳಾದ್ಯಂತ ಇರುವ ನಮ್ಮ 10 ಉತ್ಪಾದನಾ ಘಟಕಗಳು ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಪ್ರತಿದಿನ 5000 ಉತ್ಪಾದನ ಸಾಮಥ್ರ್ಯವನ್ನು ನಾವು ಅಳವಡಿಸಿದ್ದೇವೆ.” ಎಂದರು.
ಹೊಸ ಉತ್ಪನ್ನದ ಬಗ್ಗೆ ಮಾತನಾಡುತ್ತಾ, ಕರ್ಲಾನ್ ನ ಪ್ರಧಾನ ಮಾರುಕಟ್ಟೆ ಅಧಿಕಾರಿಯಾದ ಶ್ರೀ ಆಶುತೋಶ್ ವೈದ್ಯ ಅವರು, “ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚಿನ ನಿದ್ರಾಹೀನತೆ ಮತ್ತು ನಿದ್ರಾಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಭಾರತೀಯ ನಿದ್ರಾ ಸ್ಕೋರ್‍ಕಾರ್ಡ್ ತಿಳಿಸುತ್ತದೆ. ಇದಕ್ಕೆ ಕಾರಣ, ಅವಸರ ಕೆಲಸ ಕಾರ್ಯಗಳು, ಹೊರೆ, ಮತ್ತು ಬದಲಾಗುತ್ತಿರುವ ಜೀವನಶೈಲಿಗಳು. ಒಂದು ಬ್ರ್ಯಾಂಡ್ ಆಗಿ ಮಾರುಕಟ್ಟೆ ಉಗಮವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಮತ್ತು ಗ್ರಾಹಕ ಸ್ವೀಕಾರ ಮತ್ತು ನಡವಳಿಕೆಯ ಸೂಕ್ಷ್ಮಜ್ಞಾನದಿಂದ ಸಂಪೂರ್ಣ ಚಾಲಿತವಾಗಿ ಇನ್ನೂ ಹೆಚ್ಚಿನ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ನಾವೂ ಕೂಡ ಗ್ರಾಹಕರೊಂದಿಗೆ ಬೆಳೆಯುತ್ತಿದ್ದೇವೆ. ಉತ್ತಮ ಸುಖಾರಾಮವನ್ನು ಬಯಸುವಂತಹ ಮತ್ತು ಅದಕ್ಕಾಗಿ ಹೂಡಿಕೆ ಮಾಡಲು ಸಿದ್ಧರಿರುವಂತಹ ನವಯುಗದ ಗ್ರಾಹಕರಿಗಾಗಿ ವಿನ್ಯಾಸಗೊಂಡ ಮತ್ತು ಆಧುನಿಕ ತಂತ್ರಜ್ಞಾನ ಉಪಯೋಗಿಸಿ ತಯಾರಿಸಿದ ಭವಿಷ್ಯತ್ತಿನ ಉತ್ಪನ್ನಗಳನ್ನು ಹೊರತರಲು ಕೂಡ ನಾವು ಇದೇ ದೃಷ್ಟಿಕೋನವನ್ನೇ ಅಳವಡಿಸಿಕೊಳ್ಳುತ್ತಿದ್ದೇವೆ. ಗೃಹಬೇಡಿಕೆಯಲ್ಲಿನ ಬೆಳವಣಿಗೆಗೆ ನೇರವಾಗಿ ಸಂಪರ್ಕಗೊಂಡಿರುವ ನಿವಾಸಿ ಮ್ಯಾಟ್ರೆಸ್ ಮಾರುಕಟ್ಟೆಯು, 2022ರ ವೇಳೆಗೆ, ಒಟ್ಟೂ ಮ್ಯಾಟ್ರೆಸ್ ಮಾರುಕಟ್ಟೆಯ 78% ಆಗುತ್ತದೆ ಎಂದು ಅಂದಾಜಿಸಲಾಗಿದ್ದು, 10,000 ಕೋಟಿಯನ್ನು ದಾಟುತ್ತದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಹಾಸಿಗೆ ಮಾರುಕಟ್ಟೆಯು ಇನ್ನೂ ಕೂಡ ಅಸಂಘಟಿತ ವರ್ಗದಿಂದ ಆಳಲ್ಪಡುತ್ತಿದ್ದು ಅನೇಕ ಪ್ರಾದೇಶಿಕ ತಯಾರಕರುಗಳಿದ್ದಾರೆ. ಈ ವರ್ಗದಲ್ಲಿ ಮಾರುಕಟ್ಟೆ ನಾಯಕನಾಗಿರುವ ಕರ್ಲ್-ಆನ್, ಉತ್ತಮ ಗ್ರಾಹಕ ಜಾಗೃತಿಯ ನಿರ್ಮಾಣ ಮಾರ್ಗವನ್ನು ಮುನ್ನಡೆಸುತ್ತಿದ್ದು, ಆಧುನಿಕ ಆರೋಗ್ಯ ಮತ್ತು ದೇಹದಾಢ್ರ್ಯ ಅಗತ್ಯಗಳನ್ನು ಪೂರೈಸುವುದಕ್ಕೆ ವ್ಯಾಪಕ ಹಾಗು ಉತ್ತಮ ಆಯ್ಕೆಗಳು ಲಭ್ಯವಾಗುವಂತೆ ಮಾಡುತ್ತಿದೆ. ಇದರ ಜೊತೆಗೆ, ಗೃಹಪೀಠೋಪಕರಣ ಮತ್ತು ಆರಾಮ ಉತ್ಪನ್ನಗಳಿಗೆ ಬೆಳೆಯುತ್ತಿರುವ ಮಾರುಕಟ್ಟೆಯಾಗುತ್ತಿರುವ ಕರ್ಲ್-ಆನ್‍ನ ಬೆಳವಣಿಗೆ ಯೋಜನೆಯು ಬಹುತೇಕವಾಗಿ ಅಸಂಘಟಿತವಾಗಿರುವ ಮಾರುಕಟ್ಟೆಯ ಮಾರ್ಪಾಡಿಗೆ ಸನ್ನದ್ಧವಾಗಿದ್ದು, ದೊಡ್ಡದಾದ ಗೃಹ ಆರಾಮ ವರ್ಗದಲ್ಲಿ ತನ್ನನ್ನು ತಾನು ರಾಷ್ಟ್ರೀಯ ನಾಯಕನಾಗಿ ಸ್ಥಾಪಿಸಲು ಸಜ್ಜಾಗುತ್ತಿದೆ. .” ಎಂದರು.
ಫೋಟೊ ವಿವರ : ಬೆಂಗಳೂರಿನಲ್ಲಿ ಇಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಕರ್ಲಾನ್ ನ ಆಧುನಿಕ ತಂತ್ರಜ್ನಾವುಳ್ಳ ‘STR 8’ ಮ್ಯಾಟ್ರೆಸ್ ನ್ನು ಅನಾವರಣಗೊಳಿಸಿ ಮಾತನಾಡುತ್ತಿರುವ ಕರ್ಲಾನ್ ನ ಅಧ್ಯಕ್ಷ ಹಾಗೂ ನಿರ್ವಾಹಕ ನಿರ್ದೇಶಕರಾದ ಶ್ರೀ ಸುಧಾಕರ ಪೈ ಇವರೊಂದಿಗೆ ಕರ್ಲಾನ್ ನ ಪ್ರಧಾನ ಮಾರುಕಟ್ಟೆ ಅಧಿಕಾರಿಯಾದ ಶ್ರೀ ಆಶುತೋಶ್ ವೈದ್ಯ ಅವರ ಅವರನ್ನೂ ಕಾಣಬಹುದು.