ಹುಬ್ಬಳ್ಳಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡಿಜೆಲ್ ಬೆಲೆ ಗಗನಕ್ಕೇರಿದೆ. ಪ್ರಧಾನಿ ಮೋದಿ ಅಚ್ಛೆದಿನ್ ಎಂದಿದ್ದರು, ಇದೇನಾ ಅಚ್ಛೇದಿನ್ ಎಂದು ಸಚಿವ ಜಮೀರ್ ಅಹ್ಮದ ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೋದಿ ಮನ್ ಕೀ ಬಾತ್ ಅಂತಿದ್ರು , ನಮಗೆ ಮನ್ ಕೀ ಬಾತ್ ಬೇಕಿಲ್ಲ ಕಾಮ್ ಕೀ ಬಾತ್ ಬೇಕು. ಜನರಿಗೆ ಕೇಂದ್ರ ಸರ್ಕಾರದ ಆಡಳಿತ ವೈಖರಿ ಅರಿವಾಗಲಿ ಅಂತ ಸುಮ್ಮನಿದ್ದೇವೆ. ಜನರಿಗೆ ಕೇಂದ್ರ ಸರ್ಕಾರ ಡೀಜಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಕುರಿತು ಅರ್ಥವಾಗಬೇಕು. ನಾವು ಹಿಂದಿನಿಂದಲೂ ತೈಲ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು. ಮಾತೆತ್ತಿದ್ದರೆ ಸರ್ಕಾರ ಬೀಳುತ್ತೆ ಬೀಳುತ್ತೆ ಅಂತ ಹೇಳ್ತಾನೆ ಬರ್ತಿದಾರೆ. ಮೈತ್ರಿ ಸರ್ಕಾರ ಬಿಳೋದಿಲ್ಲ, ಐದು ವರ್ಷ ಆಡಳಿತ ನಡೆಸುತ್ತದೆ. ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ಘೋಷಣೆಯಾದ ಎಲ್ಲಾ ಯೋಜನೆಗಳು ಈ ಸರ್ಕಾರ ಮುಂದುವರೆಸುತ್ತೆ ಎಂದು ಜಮೀರ್ ಅಹ್ಮದ ಸ್ಪಷ್ಟ ಪಡಿಸಿದರು.