ರಾಜ್ ಕೋಟ್ ನಲ್ಲಿ ಅಕ್ಟೋಬರ್ 4 ರಿಂದ ಭಾರತ- ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್
September 5, 2018VDಕ್ರೀಡೆComments Off on ರಾಜ್ ಕೋಟ್ ನಲ್ಲಿ ಅಕ್ಟೋಬರ್ 4 ರಿಂದ ಭಾರತ- ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್
Seen By: 43
ನವದೆಹಲಿ: ಏಷ್ಯಾ ಕಪ್ ಮುಗಿದು ಒಂದು ವಾರ ಕಳೆಯುವಷ್ಟರಲ್ಲಿ ಭಾರತ- ವೆಸ್ಟ್ ಇಂಡೀಸ್ ನಡುವಣ ಸ್ವದೇಶದಲ್ಲಿ ಏಳುವಾರಗಳ ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಅಕ್ಟೋಬರ್ 4 ರಂದು ರಾಜ್ ಕೋಟ್ ನಲ್ಲಿ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ.ವೆಸ್ಟ್ ಇಂಡೀಸ್ ನಡುವಣ ಸ್ವದೇಶದಲ್ಲಿ ನಡೆಯಲಿರುವ ಸರಣಿ ವೇಳಾಪಟ್ಟಿಯನ್ನು ಇಂದು ಬಿಸಿಸಿಐ ಪ್ರಕಟಿಸಿದ್ದು, ನವೆಂಬರ್ 11 ರಂದು ಪಂದ್ಯಗಳು ಅಂತ್ಯಗೊಳ್ಳಲಿವೆ.ಆಕ್ಟೋಬರ್ 4 ರಿಂದ ನವೆಂಬರ್ 11 ರವರೆಗೂ ಸ್ವದೇಶದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಪಂದ್ಯದ ವೇಳಾಪಟ್ಟಿಯನ್ನು ಬಿಸಿಸಿಐ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿವೆ.ಈ ಅವಧಿಯಲ್ಲಿ ಭಾರತ 2 ಟೆಸ್ಟ್, 5 ಏಕದಿನ ಹಾಗೂ ಮೂರು ಟಿ-20 ಪಂದ್ಯಗಳನ್ನಾಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌದರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ರಾಜ್ ಕೋಟ್ ನಲ್ಲಿ ಅ. 4 ರಿಂದ 8ರವರೆಗೂ ಪ್ರಥಮ ಟೆಸ್ಟ್ ಹಾಗೂ ಅ. 12 ರಿಂದ 16 ರವರೆಗೂ ಹೈದ್ರಾಬಾದ್ ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯಗಳು ನಡೆಯಲಿವೆ. ಅ. 21 ರಿಂದ ಗುವಾಹಟಿಯಲ್ಲಿ ಐದು ಏಕದಿನ ಪಂದ್ಯಗಳು ಆರಂಭಗೊಳ್ಳಲಿವೆ.ಅ.24 ರಂದು ಇಂದೊರ್ ನಲ್ಲಿ ದ್ವಿತೀಯ ಹಾಗೂ ಅ. 27 ರಂದು ಪುಣೆಯಲ್ಲಿ ತೃತೀಯ ಏಕದಿನ ಪಂದ್ಯ ನಡೆಯಲಿದೆ. ಅ.29 ರಂದು ಮುಂಬೈಯಲ್ಲಿ ಹಾಗೂ ನವೆಂಬರ್ 1 ರಂದು ತಿರುವನಂತಪುರಂನಲ್ಲಿ ಪಂದ್ಯ ನಡೆಯಲಿದೆ.ಮೂರು ಅಂತರಾಷ್ಟ್ರೀಯ ಟಿ-20 ಪಂದ್ಯಗಳು ನವೆಂಬರ್ 4 ರಿಂದ ಕೊಲ್ಕತ್ತಾದಲ್ಲಿ ಆರಂಭಗೊಳ್ಳಲಿದ್ದು, 6 ರಂದು ಲಖನೌನಲ್ಲಿ ಹಾಗೂ ನವೆಂಬರ್ 11 ರಂದು ಚೆನ್ನೈನಲ್ಲಿ ಅಂತಿಮ ಟಿ-20 ಪಂದ್ಯ ನಡೆಯಲಿದೆ. ಪ್ರಸ್ತುತ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಶುಕ್ರವಾರ ಲಂಡನ್ ನಲ್ಲಿ ಐದು ಟೆಸ್ಟ್ ಪಂದ್ಯ ಆರಂಭವಾಗಲಿದೆ. ಸೆಪ್ಟೆಂಬರ್ 15 ರಿಂದ 28ರವರೆಗೂ ನಡೆಯಲಿರುವ ಏಷ್ಯಾ ಕಪ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಡಲಿದೆ. ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಅಪ್ಘಾನಿಸ್ತಾನ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.