
ಬೆಂಗಳೂರು: ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆಶಿಪ್) ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಿದ ಸರ್ಕಾರದ ಕ್ರಮವನ್ನು ಬಿಜೆಪಿ ಲೇವಡಿ ಮಾಡಿದ್ದು, ಶೀಘ್ರ ವಿಧಾನಸೌಧವೂ ಹಾಸನಕ್ಕೆ ಸ್ಥಳಾಂತರ ಆದರೆ ಅಶ್ಚರ್ಯಪಡಬೇಕಿಲ್ಲ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದ್ದು ಕಾಂಗ್ರೆಸ್-ಜೆಡಿಎಸ್ ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನು ನೋಡಿದರೆ ಶೀಘ್ರದಲ್ಲಿ ವಿಧಾನಸೌಧವೂ ಹಾಸನಕ್ಕೆ ಸ್ಥಳಾಂತರವಾದರೆ ಅಚ್ಚರಿ ಪಡಬೇಕಿಲ್ಲ.
ಕುಮಾರಸ್ವಾಮಿ ಸರ್ಕಾರ ಎಲ್ಲಾ ಕಚೇರಿಗಳನ್ನು ಹಾಸನ, ಮಂಡ್ಯ ಮತ್ತು ರಾಮನಗರಕ್ಕೆ ಸ್ಥಳಾಂತರಿಸಿ ಉಳಿದೆಲ್ಲಾ ಜಿಲ್ಲೆಗಳನ್ನು ಸೌಲಭ್ಯವಂಚಿತವಾಗಿಸಿರುವುದನ್ನು ಖಾತರಿ ಮಾಡಿಕೊಳ್ಳುವ ಸಮಯ ಇದಾಗಿದೆ. ಎಂದು ಟ್ವೀಟ್ ಮಾಡಿದೆ.