ಅತ್ಯುತ್ತಮ ಸೀರೆಗಳ ಸರಣಿ ಪ್ರದರ್ಶನ ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಪರಿಷತ್‍ನಲ್ಲಿ

Varta Mitra News

ಬೆಂಗಳೂರು, ಸೆ.5- ಕನ್ಸರ್ ಇಂಡಿಯಾ ಫೌಂಡೇಷನ್ ವತಿಯಿಂದ ದೇಶದ ನಾನಾ ವಿಭಾಗಗಳ ಅತ್ಯುತ್ತಮ ಸೀರೆಗಳ ಸರಣಿ ಪ್ರದರ್ಶನವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಪರಿಷತ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥೆ ಚಂದ್ರಜೈನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರದರ್ಶನವನ್ನು ದೆಹಲಿ-ಚೆನ್ನೈ, ಮುಂಬೈ ನಗರಗಳಲ್ಲಿ ಪ್ರಸಕ್ತ ಸಾಲಿನಲ್ಲೇ ಆಯೋಜಿಸಲಾಗುವುದು ಎಂದರು.
ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸೀರೆ ವಿನ್ಯಾಸಕರು, ಸೀರೆ ನೇಕಾರರು, ತಮ್ಮ ಕೈಮಗ್ಗದ ಅತ್ಯುತ್ತಮ ಸೀರೆಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ.
ಸೀರೆ ತಯಾರಿಕೆಯಲ್ಲಿ ಬಳಸುವ ಬಣ್ಣ, ತಾಂತ್ರಿಕತೆ, ಚಿತ್ರಗಳ ಮುದ್ರಣ, ಕಸೂತಿ, ಖಾದಿ, ಸಿಲ್ಕ್ ಕೈಮಗ್ಗದ ಬಟ್ಟೆಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ