ಬೆಂಗಳೂರು, ಸೆ.5- ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವುದರ ಜೊತೆಗೆ ಆದಾಯದ ಮೂಲವನ್ನು ಒದಗಿಸುವ ದಿಸೆಯಲ್ಲಿ ಲೈವ್ ಬ್ರಾಡ್ ಕಾಸ್ಟಿಂಗ್ ಹೊಸ ಆ್ಯಪ್ ಬಿಡುಗಡೆ ಮಾಡಿದೆ.
ಬೆಳಕಿಗೆ ಬಾರದ ಸಹಸ್ರಾರು ಪ್ರತಿಭಾವಂತರಿಗಾಗಿ ಲೈವ್ ಮಿ ಸೂಕ್ತ ಸ್ಥಳಾವಕಾಶವನ್ನು ತನ್ನ ಆ್ಯಪ್ ಮೂಲಕ ಒದಗಿಸಲಿದ್ದು, ಪ್ರತಿಭೆಗೆ ಸೂಕ್ತ ಬೆಲೆಯನ್ನು ಒದಗಿಸಿ ಕೊಡಲು ಮುಂದಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಪ್ರತಿಭೆಗೆ ವರ್ಚುವಲï ಗಿಫ್ಟ್‍ಗಳನ್ನು ಇದರ ಮೂಲಕ ಕೊಡಬಹುದಾಗಿದೆ ಹಾಗೂ ಇದನ್ನು ಪೇಪಾಲï ಮೂಖಾಂತರ ರಿಡೀಮï ಮಾಡಿಕೊಳ್ಳಬಹುದು.
ಬಹಳಷ್ಟು ತೆರೆಮರೆಯ ಪ್ರತಿಭೆಗಳ ಜೀವನ ನಿರ್ವಹಣೆಗೆ ಈ ಆ್ಯಪ್ ನೆರವಾಗಿದ್ದು, ವಿಭಿನ್ನ ಬಗೆಯ ಪ್ರತಿಭಾವಂತರನ್ನು ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗಿದೆ. ತಾವು ಮಾಡಿದ ಸೃಜನಾತ್ಮಕ ವಿಡಿಯೋವನ್ನು ಲೈವ್ ಮಿ ವೇದಿಕೆಯ ಮೂಲಕ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹಂಚಿಕೊಳ್ಳುವ ಅವಕಾಶವನ್ನು ಇದು ಒದಗಿಸುತ್ತದೆ.
ಹೊಸ ಪ್ರತಿಭೆಗೆ ನೆರವಾಗುವ ದೃಷ್ಟಿಯಿಂದ ಆ್ಯಪ್‍ನಲ್ಲಿ ಲೈವ್ ಎಂಟರ್‍ಟೈನ್ಮೆಂಟï, ಲೈವ್ ಲಾಫ್ಟರ್ ಚಾಲೆಂಜï, ಲೈವ್ ಬಾಲಿವುಡ್ ಲೈವ್ ಮ್ಯೂಸಿಕ್ ಕೂಡ ಪರಿಚಯಿಸಲಾಗಿದೆ. ಈ ಆ್ಯಪ್ ಅನ್ನು 60 ದಶಲಕ್ಷ ಜನರು ಬಳಸುತ್ತಿದ್ದು ಸ್ಥಳೀಯ ಕಲೆಗೆ ಒತ್ತು ನೀಡಲಾಗಿದೆ. ಬಳಕೆದಾರರ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಅಶ್ಲೀಲ ವಿಷಯಗಳನ್ನು ಈ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡದ ಹಾಗೇ ಅಪ್‍ಡೇಟ್ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.