
ಬೆಂಗಳೂರು: “ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್” ಚಿತ್ರದ ನಾಯಕಿ ಅಮೃತಾ ಈ ಚಿತ್ರಕ್ಕೆ ಮುನ್ನ “ಅನುಷ್ಕಾ” ಎನ್ನುವ ಮಹಿಳಾ ಕೇಂದ್ರಿತ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಲ್ಳುತ್ತಿದ್ದಾರೆ.
ದೇವರಾಜ್ ನಿರ್ದೇಶನದ “ಅನುಷ್ಕಾ” ಚಿತ್ರೀಕರಣ ಇದಾಗಲೇ ಪೂರ್ಣಗೊಂಡಿದ್ದು ಇದರಲ್ಲಿ ಅಮೃತಾ ಎರಡು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇದರಲ್ಲಿ ಒಂದು ಹಳೆಯ ಕಥೆಯಾಗಿದ್ದರೆ ಇನ್ನೂಂದು ವರ್ತಮಾನಕ್ಕೆ ಸಂಬಂಧಿಸಿದೆ.
“ಪುನರ್ಜನ್ಮದ ಕುರಿತ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಒಂದು ಕಾಲದಲ್ಲಿ ರಾಜಕುಮಾರಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ” ಅಮೃತಾ ಹೇಳುತ್ತಾರೆ.
ಚಿತ್ರದಲ್ಲಿ ರಾಜಕುಮಾರಿ, ಹೋರಾಟಗಾರ್ತಿಯ ಪಾತ್ರದಲ್ಲಿ ಅಭಿನಯಿಸುವ ಸಲುವಾಗಿ ನಟ್ ಇದೀಗ ಕುದುರೆ ಸವಾರಿಯ ತರಬೇತಿ ಹೊಂದುತ್ತಿದ್ದಾರೆ.
“ಒಂದು ಐತಿಹಾಸಿಕ ಕದನದ ದೃಶ್ಯ ಚಿತ್ರದ ಅಂತಿಮ ಬಾಗದಲ್ಲಿ ಇರಲಿದೆ.ಇದಕ್ಕಾಗಿ ನಾನು ಸಜ್ಜಾಗುತ್ತಿದ್ದೇನೆ” ಅಮೃತಾ ಹೇಳಿದ್ದಾರೆ.
ಸೂರಿ ನಿರ್ದೇಶನದ ಚಿತ್ರದಲ್ಲಿ ನನ್ನ ಭಾಗದ ಚಿತ್ರೀಕರಣ ಸೆಪ್ಟೆಂಬರ್ 24ರಿಂದ ಪ್ರಾರಂಭವಾಗಲಿದೆ ಎಂದು ಅಮೃತಾ ಹೇಳಿದ್ದಾರೆ.