
ಬೆಂಗಳೂರು,ಸೆ.5- ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ರಾಜಾಜಿನಗರ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಪೇಗೌಡ ಬಡಾವಣೆ ನಿವಾಸಿ ಮಹೇಶ್ಕುಮಾರ್ (32) ಮೃತಪಟ್ಟ ದುರ್ದೈವಿ.
ರಿಂಗ್ ರಸ್ತೆಯ ಚೌಡೇಶ್ವರಿ ಬಸ್ನಿಲ್ದಾಣ ಸಮೀಪ ರಾತ್ರಿ 11.15ರ ಸಮಯದಲ್ಲಿ ಮಹೇಶ್ಕುಮಾರ್ ರಸ್ತೆ ದಾಟುತ್ತಿದ್ದಾಗ ಅತಿವೇಗವಾಗಿ ಮುನ್ನುಗ್ಗಿದ ಕಾರು ಇವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಗಂಭೀರ ಗಾಯಗೊಂಡಿದ್ದ ಇವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ರಾಜಾಜಿನಗರ ಸಂಚಾರಿ ನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತವೆಸಗಿ ಪರಾರಿಯಾಗಿರುವ ಕಾರು ಚಾಲಕನಿಗಾಗಿ ಶೋಧ ಕೈಗೊಂಡಿದ್ದಾರೆ.