ನವದೆಹಲಿ: ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಓರ್ವ ಕ್ರಿಕೆಟಿಗನಿಂದ ಕಿರುಕುಳ ಅನುಭವಿಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಾನಿಯಾ ಪತಿ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಅವರು ಹೇಳಿಕೆ ನೀಡಿದ್ದು, ಖಾಸಗಿ ಕಾರ್ಯಕ್ರಮಕ್ಕಾಗಿ ಬಾಂಗ್ಲಾದೇಶ ರಾಜಧಾನಿ ಢಾಕಾಗೆ ತೆರಳಿದ್ದ ವೇಳೆ ಅಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟಿಗನೋರ್ವ ಸಾನಿಯಾಗೆ ಕಿರುಕುಳ ನೀಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಸಾದಾ ಕಾಲ ಮೈದಾನದ ಒಳ ಮತ್ತು ಹೊರಗೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರ ಸಬ್ಬೀರ್ ರೆಹಮಾನ್ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ್ದರಂತೆ. ನಾಲ್ಕು ವರ್ಷಗಳ ಹಿಂದೆ ಸಾನಿಯಾ ಮಿರ್ಜಾ ಹಾಗೂ ಅವರ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಖಾಸಗಿ ಕಾರ್ಯಕ್ರಮಕ್ಕಾಗಿ ಬಾಂಗ್ಲಾ ರಾಜಧಾನಿ ಢಾಕಾಗೆ ತೆರಳಿದ್ದರು. ಈ ವೇಳೆ ಬಾಂಗ್ಲಾದೇಶ ಕ್ರಿಕೆಟಿಗ ಸಬ್ಬೀರ್ ರಹಮಾನ್, ಸಾನಿಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಆರೋಪ ಮಾಡಿದ್ದರು. ಸಬ್ಬೀರ್ ವರ್ತನೆಗೆ ರೋಸಿ ಹೋದ ಪತಿ ಶೋಯಿಬ್ ಮಲ್ಲಿಕ್, ಡಾಕಾ ಕ್ರಿಕೆಟ್ ಸಮಿತಿಗೆ ದೂರು ನೀಡಿದ್ದರು. ಇದೀಗ ಡಾಕಾ ಕ್ರಿಕೆಟ್ ಸಮಿತಿ ತನಿಖೆ ಪೂರ್ಣಗೊಳಿಸಿದೆ. ಸಬ್ಬೀರ್ ರಹಮಾನ್ ಮೇಲಿನ ಆರೋಪ ಸಾಬೀತಾದಲ್ಲಿ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಲಿದ್ದಾರೆ ಎಂದು ಬಾಂಗ್ಲಾದೇಶ ಮಾಧ್ಯಮಗಳು ವರದಿ ಮಾಡಿದೆ.
ಈಗಾಗಲೇ ಸಬ್ಬೀರ್ ರೆಹಮಾನ್ ಅಭಿಮಾನಿಯೊಂದಿಗೆ ಅನುಚಿತ ವರ್ತನೆಯಿಂದ 6 ತಿಂಗಳ ನಿಷೇಧಕ್ಕೊಳಗಾಗಿದ್ದಾರೆ. ಇಷ್ಟೇ ಅಲ್ಲ ಬಾಂಗ್ಲಾ ಪ್ರಿಮಿಯರ್ ಲೀಗ್ ಟೂರ್ನಿ ವೇಳೆಯಲ್ಲೂ ಹೊಟೆಲ್ ರೂಂಗೆ ಯಾರ ಅನುಮತಿ ಪಡೆಯದೆ ಮಹಿಳೆಯನ್ನ ಕರೆದುಕೊಂಡು ಬಂದು ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ ಆರೋಪದಲ್ಲಿ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.