ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪಕ್ಷೇತರರೇ ಹೆಚ್ಚು ವಿಜೃಂಭಿಸಿದೆ

ಬೆಳಗಾವಿ, ಸೆ.3-ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪಕ್ಷೇತರರೇ ಹೆಚ್ಚು ವಿಜೃಂಭಿಸಿದ್ದು, ಸವದತ್ತಿ ಪುರಸಭೆ ಬಿಜೆಪಿ ಪಾಲಾಗಿದೆ. ಉಳಿದಂತೆ ಖಾನಾಪುರ, ಕಣ್ಣೂರು, ಚಿಕ್ಕೋಡಿ ಸ್ಥಳೀಯ ಸಂಸ್ಥೆಗಳು ಪಕ್ಷೇತರರ ಪಾಲಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ ಸಚಿವ ರಮೇಶ್‍ಜಾರಕಿಹೊಳಿ ಅವರ ಸಹೋದರ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀಹೆಬ್ಬಾಳ್ಕರ್ ಅವರ ನಡುವಿನ ಪರಸ್ಪರ ಪೈಪೆÇೀಟಿಯಿಂದಾಗಿ ಕಾಂಗ್ರೆಸ್ ನೆಲಕಚ್ಚುವ ಪರಿಸ್ಥಿತಿಗೆ ಬಂದಿದೆ.
ಜಿಲ್ಲೆಯ ರಾಮದುರ್ಗ ಪುರಸಭೆ 27 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗಳನ್ನು ಗಳಿಸಿ ಬಹುಮತ ಸಾಧಿಸಿದೆ. ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿದ್ದರೆ. ಪಕ್ಷೇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಸವದತ್ತಿ ಪುರಸಭೆಯಲ್ಲಿ ಬಿಜೆಪಿ 17ರಲ್ಲಿ, ಕಾಂಗ್ರೆಸ್ 9 ಹಾಗೂ ಪಕ್ಷೇತರರು ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಚಿಕ್ಕೋಡಿ ಪುರಸಭೆಯ 23 ಸ್ಥಾನಗಳ ಪೈಕಿ ಈಗಾಗಲೇ ಪಕ್ಷೇತರರು 13 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸ್ಥಳೀಯ ಸಂಸ್ಥೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಖಾತೆ ತೆರೆಯಲು ಹೆಣಗಾಡಿವೆ.
ಕಣ್ಣೂರು ಪುರಸಭೆಯ 23 ಕ್ಷೇತ್ರಗಳ ಪೈಕಿ ಪಕ್ಷೇತರರು 22ರಲ್ಲಿ ಜಯ ಗಳಿಸಿದ್ದಾರೆ. ಇಲ್ಲೂ ಕೂಡ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಖಾತೆ ತೆರೆಯಲು ಪರದಾಡಿವೆ.
ಖಾನಾಪುರ ಪಟ್ಟಣ ಪಂಚಾಯ್ತಿಯ 20 ಕ್ಷೇತ್ರಗಳ ಪೈಕಿ 20ರಲ್ಲೂ ಪಕ್ಷೇತರರೇ ಜಯಗಳಿಸಿದ್ದು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಇಲ್ಲಿ ತಲೆ ಎತ್ತಲಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ