ಬೆಂಗಳೂರು,ಸೆ.3-ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಸೆ.4 ಮತ್ತು 5ರಂದು ರಿಸರ್ವ್ ಬ್ಯಾಂಕ್ ನಿವೃತ್ತ ನೌಕರರ ಸಂಘ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಪದ್ಮ ನಾರಾಂiÀಣ್ ಅಂದು ಬೆಳಗ್ಗೆ 11 ಗಂಟೆಗೆ ನಗರದ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಮುಂಭಾಗದಲ್ಲಿ ಧರಣಿ ನಡೆಸುವುದಾಗಿ ತಿಳಿಸಿದರು.
ಕಳೆದ 20 ವರ್ಷಗಳಿಂದಲೂ ನಿವೃತ್ತ ರಿಸರ್ವ್ ಬ್ಯಾಂಕ್ ಪಿಂಚಣಿದಾರರಿಗೆ ಪಿಂಚಣಿ ಪರಿಷ್ಕರಣೆ ಮಾಡಿಲ್ಲಘಿ. ನಿಯಮಾನುಸಾರ ಪ್ರತಿ 5 ವರ್ಷಕ್ಕೊಮ್ಮೆ ಮಾಡಬೇಕಾದ ಪಿಂಚಣಿ ಪರಿಷ್ಕರಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ. ಇದರಿಂದ ಪಿಂಚಣಿದಾರರ ಬದುಕು ಸಂಕಷ್ಟದಲ್ಲಿದೆ ಎಂದರು.
ಆರ್ಬಿಐ ಬ್ಯಾಂಕ್ನ ಒಟ್ಟು 28 ಸಾವಿರ ಪಿಂಚಣಿದಾರರ ಪರಿಷ್ಕರಣೆಯು ನಿರೀಕ್ಷೆಯಲ್ಲಿದೆ. ಪಿಂಚಣಿ ಪರಿಷ್ಕರಣೆ ಆಗದೇ ಇರುವುದರಿಂದ ಇದುವರೆಗೆ ಸಿಗಬೇಕಾದ ಪಿಂಚಣಿಯು ಸಿಕ್ಕದೆ ನಷ್ಟವುಂಟಾಗಿದೆ.
ಪಂಚಣಿ ಪರಿಷ್ಕರಣೆಯಿಂದ ಬ್ಯಾಂಕ್ಗೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲಘಿ. ಈಗಾಗಲೇ ಈ ಸಂಬಂಧ ಆರ್ಬಿಐ ಗೌರ್ನರ್ಗೆ ಕೇಂದ್ರ ಆರ್ಥಿಕ ಸಚಿವರಿಗೆ, ಪ್ರಧಾನಿ ಅವರಿಗೆ ಮನವಿ ನೀಡಿದರೂ ಯಾವುದೆ ಪ್ರಯೋಜನವಾಗಿಲ್ಲಘಿ. ಆದ್ದರಿಂದ ಅನಿಯವಾರ್ಯವಾಗಿ ಪಿಂಚಣಿ ಪರಿಷ್ಕರಣೆಗಾಗಿ ಧರಣಿ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು.